ದಾವಣಗೆರೆ ಮಾರ್ಚ್2 : ಪ್ರಸಕ್ತ ಸಾಲಿನಲ್ಲಿ ಡಾ|| ಬಾಬು ಜಗಜೀವನ್ ರಾಂ ರವರ 119ನೇ ಹಾಗೂ ಡಾ| ಬಿ.ಆರ್ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಡಾ|| ಬಾಬು ಜಗಜೀವನ್ ರಾಂ ಹಾಗೂ ಡಾ| ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮಾರ್ಚ್ 5 ರೊಳಗಾಗಿ ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಕಛೇರಿಗೆ ತಾವು ಸಾಧಿಸಿರುವ ಪ್ರಮುಖ ಅಂಶಗಳನ್ನೊಳಗೊಂಡಂತೆ ಪಡೆದಿರುವ ಪ್ರಶಸ್ತಿಗಳ ಕುರಿತು ಸಂಕ್ಷಿಪ್ತವಾಗಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದೆಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಲಘುಬಾರಿ ವಾಹನ ಚಾಲನಾ ತರಬೇತಿ
