ದಾವಣಗೆರೆ :
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ವಿರೋಧಿಸಿ ಎಸ್‍ಡಿಪಿಐ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದ ಜೆ ಇಮಾಮ್ ನಗರ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಫಯಾಜ್ ಅಹಮದ್ ಮಾತನಾಡಿ, ಸಿಎಎ ಜಾರಿ ಕೇವಲ ಚುನಾವಣೆ ಗಿಮಿಕ್ ಆಗಿದೆ. ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ ಎಸ್‍ಬಿಐ ಬಿಡುಗಡೆ ಮಾಡಿದ ಚುನಾವಣಾ ಬಾಂಡ್ ನ ವರದಿಯ ಭ್ರಷ್ಟಾಚಾರವನ್ನು ಮರೆಮಾಚಲು ಸಿಎಎ ಎಂಬ ಅಸಂವಿಧಾನಿಕ ಕಾನೂನನ್ನು ಜಾರಿ ಮಾಡಿ ದೇಶವನ್ನು ವಿಭಜನೆ ಮಾಡುವ ಕುತಂತ್ರಕ್ಕೆ ಕೈಹಾಕಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಯಾಹಿಯ ಮಾತನಾಡಿ, ಸಿಎಎ ಕಾನೂನಿನ ವಿರುದ್ಧ ಹೋರಾಟ ಮುಸ್ಲಿಮರ ಹೋರಾಟ ವಾಗದೆ .ಇದು ಜನಸಾಮಾನ್ಯರ ಹೋರಾಟವಾಗಬೇಕಿದೆ ಏಕೆಂದರೆ ಬಿಜೆಪಿಯ ಧರ್ಮಧಾರಿತವಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡುತ್ತಿದೆ ಮತ್ತು ದೇಶವನ್ನು ವಿಭಜನೆ ಮಾಡುವ ಹುನ್ನಾರ ಮಾಡುತ್ತಿದ್ದೆ, ಆದ್ದರಿಂದ ದೇಶದ 140 ಕೋಟಿ ಜನರು ಕೂಡ ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕೋಶಾಧಿಕಾರಿ ಎ ಆರ್ ತಾಹೀರ್ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ,ನವೀದ್ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು.