Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಸಂಘಟನಾ ಜೀವಿ ನ್ಯಾಯಪರನಾಗಿರಬೇಕೆ ಹೊರತು ಲಾಭಬುಡುಕನಾಗಿರಬಾರದು
ಅಭಿಪ್ರಾಯ

ಸಂಘಟನಾ ಜೀವಿ ನ್ಯಾಯಪರನಾಗಿರಬೇಕೆ ಹೊರತು ಲಾಭಬುಡುಕನಾಗಿರಬಾರದು

Dinamaana Kannada News
Last updated: March 29, 2024 7:24 am
Dinamaana Kannada News
Share
davanagere
davanagere
SHARE

ಲಡಾಯಿ ಪ್ರಕಾಶನ ಪ್ರಕಟಿಸಿರುವ ನವೀನ್ ಸೂರಿಂಜೆಯವರ “ನಡು ಬಗ್ಗಿಸದ ಎದೆಯ ದನಿ” ಮಹೇಂದ್ರ ಕುಮಾರ್ ಅವರ ಸಂಘಟನಾ ಬದುಕಿನ ಅನುಭವ ಕಥನ ಪುಸ್ತಕದಲ್ಲಿ ದಾಖಲಿಸಿರುವ ಅನುಭವಗಳು ,ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ನನ್ನಂತವನ ಅನುಭವಗಳು ಕೂಡ ಹೌದು.

ವಿದ್ಯಾರ್ಥಿ ಯುವಜನ ಸಂಘಟನೆ ಯೊಂದಿಗೆ ಮೂರು ದಶಕಗಳ ಹಿಂದೆ ಆರಂಭಗೊಂಡ ನನ್ನ ಸಂಘಟನಾ ಪಯಣ ಸರ್ಕಾರಿ ನೌಕರರ ಸಂಘ ಹಾಗೂ ಶಾಲಾ ಶಿಕ್ಷಕರ ಸಂಘದಲ್ಲಿ ಮುಂದುವರೆದಿದೆ.

ಅಧಿಕಾರ ಹಿಡಿದಿರುವ ಹಾಗೂ ಅಧಿಕಾರದ ವಿವಿಧ ಮಜಲುಗಳನ್ನು ಅನುಭವಿಸುತ್ತಿರುವ ನಾಯಕರುಗಳಿಗೆ, ಸೈದ್ಧಾಂತಿಕ ಬದ್ಧತೆ ಹಾಗೂ ನಿಷ್ಠೆಯುಳ್ಳಂತಹ ಅನೇಕ ಹೋರಾಟಗಾರರು ‘ಸಾಯಲು ಹಾಗೂ ಸಾಯಿಸಲು ಕಾಲಾಳುಗಳು ಬೇಕೆ ವಿನಹ ನಾಯಕರಾಗುವುದು ಬೇಕಿಲ್ಲ’ ಎಂಬ ಮಾತು ನಮ್ಮಂತವರ ಸ್ವಾಭಿಮಾನವನ್ನು ಸ್ಪರ್ಶಿಸಿ ಜಾಗೃತಗೊಳಿಸಿದೆ.

ಯಾವ ಲಾಭವೂ ಇಲ್ಲದೆ ಸಮಾಜಮುಖಿಯಾಗಿ ತೊಡಗಿಸಿಕೊಂಡ ಜನ ಪ್ರಸ್ತುತ ಸಮಾಜಸೇವೆಯಲ್ಲಿ ಕಡಿಮೆಯಾಗುತ್ತಿರುವ  ಕಾಲಘಟ್ಟದಲ್ಲಿ ನಾವಿದ್ದೇವೆ ಸೇವೆ ,ಹೋರಾಟದ ಹೆಸರಿನಲ್ಲಿ ಸಂಘಟನೆಗೆ ಇಳಿದಿರುವ ಕೆಲವರು ತಮ್ಮ ಸ್ವಾರ್ಥ ಹಾಗೂ ಸ್ವಹಿತಾ ಸಕ್ತಿಗಾಗಿ ,ರಾಜಕೀಯ ಲಾಭಕ್ಕಾಗಿ ಸಂಘಟನೆಗಳನ್ನ ಸೃಷ್ಟಿಸಿಕೊಳ್ಳಲಾಗಿದೆ ಎನ್ನುವ ಅನುಮಾನ ಇತ್ತೀಚಿಗೆ  ಬಲವಾಗತೊಡಗಿದೆ.

ಮಹೇಂದ್ರ ಕುಮಾರ್ ಅವರ ಅನುಭವ ಕಥನದಲ್ಲಿ ನವೀನ್ ಸೂರಂಜಿಯವರು ಉಲ್ಲೇಖಿಸಿರುವಂತೆ ಈ ದೇಶಕ್ಕೆ ಬೇಕಿರುವುದು ಗಲಾಟೆಗಳು ಅಲ್ಲ ,ಜಗಳಗಳು ಅಲ್ಲ ,ಪರಸ್ಪರ ವೈಷಮ್ಯಗಳು ಅಲ್ಲ, ಈ ದೇಶಕ್ಕೆ ಬೇಕಿರೋದು ಪ್ರೀತಿಯ ಹೆಜ್ಜೆ, ಸೌಹಾರ್ದತೆಯ ಹೆಜ್ಜೆ ,ಸಮನ್ವತೆಯ ಕೂಗು ಆ ಧ್ವನಿಯೇ ನಮ್ಮ ಧ್ವನಿ ಹಾಗಾಗಿ ನಮ್ಮ ಧ್ವನಿ ಜೀವ ಪಥದೊಂದಿಗೆ ಎಂಬ ಮಾತು ಅಕ್ಷರಶಃ ಸತ್ಯ , ಅಧಿಕಾರ ಪಡೆದ ಅಥವಾ ಅಧಿಕಾರ ಹಿಡಿದ ಇಲ್ಲವೇ ಅಧಿಕಾರ ಹೊಡೆದುಕೊಂಡ  ನಾಯಕರುಗಳು ಪರಸ್ಪರ ಒಬ್ಬರು ಮತ್ತೊಬ್ಬರ ಮಧ್ಯೆ ದ್ವೇಷಗಳನ್ನು ಜೀವಂತವಾಗಿರಿಸಿ ತಮ್ಮ ಸ್ಥಾನ ಪಲ್ಲಟವಾಗದಂತೆ ನೋಡಿಕೊಂಡು ಸ್ಥಾನ-ಮಾನಿಯಾಗಲು ಪ್ರಯತ್ನಿಸುವುದು ಈ ದೇಶದ ವ್ಯವಸ್ಥೆಯ ದುರಂತ.

ನ್ಯಾಯಪರ ಇರುವ ನಿಷ್ಠಾವಂತರನ್ನು ಸಮಾಜ ಹೊಡೆಯುವುದಕ್ಕೆ ,ಮನುಷ್ಯ- ಮನುಷ್ಯರ ನಡುವೆ ಕಂದಕಗಳನ್ನು ಸೃಷ್ಟಿ ಮಾಡೋದಕ್ಕೆ ,ಬಳಸಿಕೊಳ್ಳಲಾಗುತ್ತಿದೆ ,ಬದ್ಧತೆ ಹೊಂದಿರುವ ಜನಗಳನ್ನ ಒಂದು ರೀತಿಯ ಅಸ್ತ್ರವಾಗಿ ಮಾಡಿಕೊಳ್ಳಲಾಗುತ್ತಿದೆ,ಕೇವಲ ಅನುಕಂಪ ಹಾಗೂ ಲೊಚಗುಟ್ಟುವಿಕೆಯಿಂದ ಯಾರ ಭವಿಷ್ಯವು ಬದಲಾಗುವುದಿಲ್ಲ ಅದಕ್ಕೆ ಬದಲಾಗಿ ಪ್ರಾಂಜಲ ಮನಸಿನ ಬೆಂಬಲ ಇರಬೇಕಿದೆ ,ತಬ್ಬಲಿ ಸಮಾಜಗಳ ಜನರ ಬದ್ಧತೆ ಹಾಗೂ ಧೈರ್ಯಗಳಿಗೆ ನೈಜ ಮತ್ತು ಪ್ರಾಮಾಣಿಕ ಬೆಂಬಲದ ಕೊರತೆ ಎಲ್ಲಾ ರಂಗಗಳಂತೆ  ಸಂಘಟನಾ ರಂಗವನ್ನು ಹೊಕ್ಕು ಹಾಳು ಮಾಡಿರುವುದು ಈ ವ್ಯವಸ್ಥೆಯ ದೌರ್ಬಲ್ಯವಲ್ಲದೆ ಬೇರೇನು ಅಲ್ಲ.

ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ನೈಜ ಕಾಳಜಿ ಇದ್ದರೆ ದ್ವೇಷಸೂಯೆ ಹಾಗೂ ಮತ್ಸರಗಳಿಂದ ಹೊರಬರಬೇಕೆಂಬ ಹಂಬಲವುಳ್ಳ  ಜನರ ಕನಸುಗಳಿಗೆ ನೀರೆರಯಬೇಕಿದೆ.

ಸಂಘಟನಾ ಬದುಕಿನಲ್ಲಿ ಇರುವವರು ನ್ಯಾಯಪರ ನಾಗಿರುವುದರ ಜೊತೆಗೆ ನಿಷ್ಟುರವಾದಿಯಾಗಿರಬೇಕು*, ಲಾಭ ಬುಡುಕತನ ಮನಸ್ಥಿತಿ ಹೊಂದಿರುವ ಯಾವ ನಾಯಕನಿಂದ ಇದುವರೆಗೆ ಯಾವ ಕ್ರಾಂತಿಯು ಆಗಿಲ್ಲ, ಕ್ರಾಂತಿ ಎಂದರೆ ಭಗತ್ ಸಿಂಗ್ ಹೇಳಿದಂತೆ ಅವ್ಯವಸ್ಥೆಯ ಬುನಾದಿಯ ಮೇಲೆ ಕಟ್ಟಿದ ವ್ಯವಸ್ಥೆಯ ಬದಲಾವಣೆ ಆಗಬೇಕು ಅಲ್ಲದೆ ಯಾವ ಮದ್ದು ಗುಂಡುಗಳ ಆರಾಧನೆ ಅಲ್ಲಾ,ಅಂತೆಯೇ ಕ್ರಾಂತಿಯು ತ್ಯಾಗ ಹಾಗೂ ಬಲಿದಾನವನ್ನು ಕೇಳುತ್ತದೆ.ತನ್ನೊಳಗೆ ತಾನು ಬದಲಾವಣೆ ಆಗದವರು ಬೇರೆಯವರನ್ನಾಗಲಿ ಹಾಗೂ ವ್ಯವಸ್ಥೆಯ ಬದಲಾವಣೆಗೆ ಪ್ರಯತ್ನಿಸುವುದು ವ್ಯರ್ಥ ಪ್ರಯತ್ನ.

ಗೋಸುಂಬೆತನ,ಗುಳ್ಳೆ ನರಿ ಬುದ್ಧಿಯ ಹಾಗು ಮನಸು-ಮನಸುಗಳ ನಡುವೆ ಗೋಡೆ ಕಟ್ಟುವ ಜನಗಳ ಮಧ್ಯೆ ನಿಷ್ಠೆ ,ಪ್ರಾಮಾಣಿಕತೆ ,ಬದ್ಧತೆ ಹಾಗೂ ನಾವು ವಹಿಸಿಕೊಂಡಿರುವ ಜವಾಬ್ದಾರಿಯ ಹೊಳನೋಟದ ಅರಿವು ಇದ್ದರೆ ನಮ್ಮ ನಡುವೆ ಪ್ರೀತಿಯ ಬೆಸುಗೆ ಸದಾ ಇರುತ್ತದೆ.

“ನಡುಬಗ್ಗಿಸದ ಎದೆಯ ದನಿ” ಪುಸ್ತಕದೊಳಗೆ ಹೇಳಿರುವಂತೆ ಕಾನೂನು ಕೈಗೆ ತೆಗೆದುಕೊಳ್ಳುವುದು ಕ್ರಿಮಿನಲ್ ಕಿಡಿಗೇಡಿತನವಾದರೂ ಅದಕ್ಕೆ ಧೈರ್ಯ ಹಾಗೂ ಬದ್ಧತೆ ಬೇಕುಎನ್ನುವ ಮಾತು ಸಂಘಟನಾ ಬದುಕಿನ ಸುಧೀರ್ಘ ದಾರಿಯಲ್ಲಿ ನಡೆದು ಬಂದಿರುವ ನನ್ನಂಥವನ ಅನುಭವ ಮಹೇಂದ್ರಕುಮಾರ್ ಅವರ ಅನುಭವಕ್ಕಿಂತ ಹೊರತೇನಲ್ಲ.

ಬಸವರಾಜ ಸಂಗಪ್ಪನವರ್
ಹರಪನಹಳ್ಳಿ

 

TAGGED:dinamaana.comdinamaana.com.davanagere newsThe organization must be fair and not profit-seeking.ದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿಸಂಘಟನಾ ಜೀವಿ ನ್ಯಾಯಪರನಾಗಿರಬೇಕೆ ಹೊರತು ಲಾಭಬುಡುಕನಾಗಿರಬಾರದು.
Share This Article
Twitter Email Copy Link Print
Previous Article M. Nagendra Rao" award to R. Ravi., ಆರ್.ರವಿಗೆ ‘ಎಂ.ನಾಗೇಂದ್ರರಾವ್’ ಪ್ರಶಸ್ತಿ
Next Article The skills of lawyers should be improved ವಕೀಲರು ಕೌಶಲ್ಯತೆ ವೃದ್ದಿಸಿಕೊಳ್ಳಬೇಕು : ಪ್ರೊ.ಡಾ.ನಟರಾಜ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಖಾಲಿ ಸ್ಥಾನಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ :   ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ ಇಲಾಖೆ  ವ್ಯಾಪ್ತಿಯಡಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನಡೆಸುವ ಒಟ್ಟು 22…

By Dinamaana Kannada News

ಮಾದಿಗ ಮತ್ತು ಸಹೋದರ ಜಾತಿಗಳಿಗೆ ಒಳಮೀಸಲಾತಿ ವರ : ಮಾಜಿ ಸಚಿವ ಎಚ್.ಆಂಜನೇಯ

ದಾವಣಗೆರೆ, ನ.15 (Davanagere): ಅಸ್ಪೃಶ್ಯತೆ ನೋವು, ಸೌಲಭ್ಯಗಳ ಮರಿಚೀಕೆ, ಕೈಗೆಟುಕದ ಮೀಸಲಾತಿ ಹೀಗೆ ಅನೇಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮಾದಿಗ…

By Dinamaana Kannada News

ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ದಾವಣಗೆರೆ (Davanagere ): ನ್ಯಾಮತಿ ತಾಲ್ಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು…

By Dinamaana Kannada News

You Might Also Like

arrest
ತಾಜಾ ಸುದ್ದಿ

crime news | ರೌಡಿಶೀಟರ್ ಕಣುಮನ ಕೊಲೆ ಪ್ರಕರಣ : 10 ಆರೋಪಿಗಳು ಆಂದರ್

By Dinamaana Kannada News
Lokayukta Davanagere
ತಾಜಾ ಸುದ್ದಿ

Lokayukta | ಒಳಚರಂಡಿ ಮಂಡಳಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಪ್ರಥಮ ಪಿ.ಯು.ಸಿ ಪಿ.ಸಿ.ಎಂ.ಬಿ(ವಿಜ್ಞಾನ ವಿಭಾಗ) ವಿಷಯಗಳಿಗೆ ದಾಖಲಾತಿ ಪಡೆಯಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?