Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ
ತಾಜಾ ಸುದ್ದಿ

ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ

Dinamaana Kannada News
Last updated: March 31, 2024 1:11 pm
Dinamaana Kannada News
Share
Hope Trust
ಆಶಾಕಿರಣ ಟ್ರಸ್ಟ್
SHARE

ದಾವಣಗೆರೆ :
ವಿಶೇಷ ಮಕ್ಕಳನ್ನು ದೇವರ ಮಕ್ಕಳಂತೆ ಆರೈಕೆ ಮಾಡುತ್ತಾ, ಪೋಷಿಸುತ್ತಿರುವ ಅಂಗವಿಕಲ ಆಶಾಕಿರಣ ಟ್ರಸ್ಟ್ನಂತಹ ಸಂಸ್ಥೆಗಳ ಸೇವೆ ಮಾದರಿ ಕಾರ್ಯವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಶಿವನಹಳ್ಳಿ ರಮೇಶ ಶ್ಲಾಘಿಸಿದರು.

ನಗರದ ಎಸ್ಸೆಸ್ ಲೇಔಟ್‍ನ ಅಂಗವಿಕಲ ಆಶಾಕಿರಣ ಟ್ರಸ್ಟ್‍ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಂಗವಿಕರ ಮಕ್ಕಳಿಗೆ 28 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಕಿ ಯಶೋಧಮ್ಮನವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ವಿಶೇಷ ಮಕ್ಕಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ಇಲ್ಲಿನ ಸಂಸ್ಥೆಯಲ್ಲಿ ಆರೈಕೆ ಮಾಡಿ, ಪೋಷಿಸುತ್ತಾ ಬಂದವರ ಸೇವೆ ಇತರ ರಿಗೂ ಪ್ರೇರಣೆಯಾಗಿದೆ ಎಂದರು.

ಬುದ್ಧಿಮಾಂದ್ಯ ಮಕ್ಕಳು, ವಿಕಲಚೇತನ ಮಕ್ಕಳು ಹೀಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯಶೋಧಮ್ಮ ಸೇರಿದಂತೆ ಇಲ್ಲಿನ ಸಿಬ್ಬಂದಿ ಸಾಮಾನ್ಯ ಮಕ್ಕಳಂತೆ ಈ ಮಕ್ಕಳನ್ನು ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿನ ಸಿಬ್ಬಂದಿ ಮಕ್ಕಳು ಸಹ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ ಮುಗಿಸಿರುವುದು ಗಮನಾರ್ಹ. ತಾವು ಕಳೆದ 3 ದಶಕಗಳಿಂದಲೂ ಸಂಸ್ಥೆಯ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದು, ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಅವರು ತಿಳಿಸಿದರು.

ಪತ್ರಕರ್ತ ನಾಗರಾಜ ಎಸ್.ಬಡದಾಳ್ ಮಾತನಾಡಿ, ಅಂಗವಿಕಲರ ಆಶಾಕಿರಣ ಟ್ರಸ್ಟ್, ವೀರೇಶ್ವರ ಪುಣ್ಯಾಶ್ರಮದಂತಹ ಸಂಸ್ಥೆಗಳಲ್ಲಿ ದೇವರ ಮಕ್ಕಳ ಆರೈಕೆ, ಪೋಷಣೆಯಾಗುತ್ತದೆ. ಜನ ಪ್ರತಿನಿಧಿಗಳು, ಉಳ್ಳವರು, ಆರ್ಥಿಕವಾಗಿ ಸ್ಥಿತಿವಂತರು ತಮ್ಮ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ, ತಮ್ಮ ಹಿರಿಯರ ಸ್ಮರಣೆಯಲ್ಲಿ ಇಂತಹ ಮಕ್ಕಳಿಗೆ ಪೂರಕವಾಗಿ ಬಟ್ಟೆ, ಬರೆ, ಕಲಿಕಾ ಸಾಮಗ್ರಿ, ಸಂಗೀತ ಪರಿಕರ ಒದಗಿಸುವ ಮೂಲಕ ಮಕ್ಕಳು ಸ್ವಾವಲಂಬಿಯಾಗಲು ಪ್ರೇರಣೆಯಾಗಬೇಕು ಎಂದು ಮನವಿ ಮಾಡಿದರು.

ಪತ್ರಕರ್ತ ಮಂಜುನಾಥ ಗೌರಕ್ಕಳವರ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಸಾಮಾನ್ಯ ಶಾಲೆಗಳನ್ನು ನಡೆಸುವುದೇ ಕಷ್ಟ. ಅದರಲ್ಲೂ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವುದು ಬಹಳ ತ್ರಾಸದ ಕೆಲಸ. ಆ ಮಕ್ಕಳ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಅರಿತು, ಆ ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಿ ಮುಖ್ಯವಾಹಿನಿಗೆ ತರುವ ಕೆಲಸವನ್ನು ಈ ಸಂಸ್ಥೆ ಹಾಗೂ ಶಿಕ್ಷಕರು ಮಾಡುತ್ತಿರುವುದು ಶ್ಲಾಘನೀಯ. ನೂರಾರು ವಿಶೇಷ ಚೇತನಮಕ್ಕಳಿಗೆ ಪೆÇೀಷಣೆ ಅಷ್ಟೊಂದು ಸುಲಭವೂ ಆಲ್ಲ ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎ.ಜೆ.ರವಿಕುಮಾರ ಮಾತನಾಡಿ, ವಿಶೇಷ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಮನೆಯಲ್ಲಿ ಒಂದು ವಿಶೇಷ ಚೇತನ ಮಗುವಿದ್ದರೇ ನೋಡಿಕೊಳ್ಳುವುದು ಕಷ್ಟ. ಆದರೆ ಈ ಸಂಸ್ಥೆ ನೂರಾರು ಮಕ್ಕಳ ಪೋಷಣೆ ಮಾಡುತ್ತಿದೆ. ಇದು ನಿಜಕ್ಕೂ ದೇವರ ಸೇವೆ ಮಾಡಿದಂತೆಯೇ, ಇಲ್ಲಿ ಕೆಲಸ ಮಾಡುವ ಶಿಕ್ಷಕಿಯರು ತಮ್ಮ ಮಕ್ಕಳನ್ನು ಕಾಳಜಿ ವಹಿಸುವಂತೆ ಈ ವಿಶೇಷ ಚೇತನ ಮಕ್ಕಳ ಪಾಲನೆ ಮಾಡುತ್ತಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.

ಸನ್ಮಾನಿತರಾದ ದೈಹಿಕ ಶಿಕ್ಷಕಿ ಯಶೋಧಮ್ಮ ಮಾತನಾಡಿ, ಈ ಸನ್ಮಾನ ನನ್ನ ಜೊತೆ ಅಂಗವಿಕಲ ಮಕ್ಕಳ ಸೇವೆ ಮಾಡುತ್ತಿರುವ ಎಲ್ಲಾ ಶಿಕ್ಷಕ ವೃಂದ, ಆಡಳಿತ ವರ್ಗಕ್ಕೆ ಸಲ್ಲುತ್ತದೆ. 28 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಲ್ಲಿನ ಮಕ್ಕಳು ಕೆಲ ಕ್ರೀಡಾಕೂಟಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ, ಚಿನ್ನದ ಪದಕ ತಂದಿದ್ದಾರೆ. ಇದೇ ನನ್ನ ಜೀವಮಾನದ ಸಾಧನೆ ಎಂದು ಭಾವುಕರಾದರು.

ಆಶಾಕಿರಣ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ರಮಣ್‍ಲಾಲ್ ಸಾಂಘವಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಪೋಪಟ್ ಲಾಲ್ ಜೈನ್, ಪದಾಧಿಕಾರಿಗಳು ಹಾಗೂ ವಿಶೇಷ ಚೇತನ ಮಕ್ಕಳು, ಪೋಷಕರು ಕಾರ್ಯಕ್ರಮದಲ್ಲಿದ್ದರು.

TAGGED:dinamaanadinamana.com.davanagere newsray of hope.ಆಶಾಕಿರಣ ಟ್ರಸ್ಟ್.ದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿ
Share This Article
Twitter Email Copy Link Print
Previous Article harihara ಯೋಗ್ಯರಿಗೆ ಮತ ಚಲಾಯಿಸಿ
Next Article voter awareness ಮತದಾನ ಜಾಗೃತಿಗೆ ಬೈಕ್ ರ್‍ಯಾಲಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davangere news : ಸಹಾಯಕ ಇಂಜಿನಿಯರ್ ನೇಮಕಾತಿಗೆ ಆ.11 ರಂದು ಪರೀಕ್ಷೆ: ಕಟ್ಟೆಚ್ಚರ ವಹಿಸಲು ಡಿಸಿ ಸೂಚನೆ

ದಾವಣಗೆರೆ  (Davangere District) : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆಯಲ್ಲಿನ…

By Dinamaana Kannada News

ಬಸವನಗೌಡ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು : ಶಾಸಕ ಬಿ.ಪಿ. ಹರೀಶ್

ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಹಾಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇಬೇಕು. ಅವರ ಬದಲು ಹಿರಿಯರಾದ…

By Dinamaana Kannada News

ದಾವಣಗೆರೆ |ಇದೇ ಮೊದಲ ಬಾರಿಗೆ ಓಲ್ಡ್ ಟೈರ್ ರಿಪೇರಿದಾರರಿಗೆ ಲೇಬರ್ ಕಾರ್ಡ್ ವಿತರಣೆ

ದಾವಣಗೆರೆ : ದಾವಣಗೆರೆ ಜಿಲ್ಲಾ ಓಲ್ಡ್ ಟೈರ್ ರಿಪೇರಿದಾರರು ಹಾಗೂ ಮಾರಾಟಗಾರರ ಸಂಘದ ವತಿಯಿಂದ ಹಾಗೂ ಅಸಂಘಟಿತ ಕಾರ್ಮಿಕ ಸಾಮಾಜಿಕ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?