ದಾವಣಗೆರೆ : ಜಿಲ್ಲಾ ಅಬಕಾರಿ ಇಲಾಖಾ ವತಿಯಿಂದ 51-ಘೋರ ಸ್ವರೂಪದ, 76-ಸನ್ನದು ಷರತ್ತು ಉಲ್ಲಂಘನೆ ಮೊಕದ್ದಮೆಗಳು (ಸನ್ನದುಗಳ ವಿರುದ್ಧ) ಮತ್ತು 346-ಡಾಬಾ, ಇತರೆ ಅನಧಿಕೃತ ಸ್ಥಳದಲ್ಲಿ ಮದ್ಯ ಮಾರಾಟದ ಮೊಕದ್ದಮೆಗಳು ಸೇರಿದಂತೆ ಒಟ್ಟು 473 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಡಿಸಿ ಶೈಲಜಾ ಅವರು ತಿಳಿಸಿದ್ದಾರೆ.
ಮಾ.16 /3/2024 ರಿಂದ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಂದಿನಿಂದ ದಿ: 17/4/24 ವರೆಗೆ ಒಟ್ಟು 812 ಲೀ. ಮದ್ಯ, 185 ಲೀ. ಬಿಯರ್, 15 ಲೀ.ಗೋವಾ ಮದ್ಯ ಮತ್ತು 52 ಲೀ. ಸೇಂದಿಯನ್ನು ವಶ ಪಡಿಸಿಕೊಳ್ಳಲಾಗಿದೆ. 29-ದ್ವಿಚಕ್ರ,1-ಆಟೋ ಒಟ್ಟು 30 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಮತ್ತು ಬಿಯರ್ ನ ಮೊತ್ತ ರೂ. 4,41,590/-ಗಳು, ವಾಹನಗಳ ಮೊತ್ತ ರೂ.19,85,000/- ರೂ.ಗಳಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.