Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿಗೆ ಗಂಡಾಂತರ
Blogತಾಜಾ ಸುದ್ದಿ

ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿಗೆ ಗಂಡಾಂತರ

Dinamaana Kannada News
Last updated: April 20, 2024 5:29 pm
Dinamaana Kannada News
Share
Panchamasali Gurupeeth
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ವಚನಾನಂದ ಶ್ರೀ ಹಾಗೂ ಸಮಾಜದ ಮುಖಂಡರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
SHARE

ಹರಿಹರ: ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳರ ಹಿಡಿತವಿಲ್ಲದ ನಾಲಿಗೆಯಿಂದಾಗಿ ಬಿಜೆಪಿ ಗಂಡಾಂತರವಾಗಲಿದೆ. ದೊಡ್ಡ ನಾಯಕರಾಗಿ ಬೆಳೆಯಬೇಕಾದವರು ಆಧಾರ ರಹಿತವಾಗಿ ಮಾತನಾಡುವುದನ್ನು ಬಿಡಬೇಕೆಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಆಗ್ರಹಿಸಿದರು.

ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳ ಕುರಿತು ಯತ್ನಾಳ ಆಡಿರುವ ಮಾತುಗಳು, ವ್ಯಕ್ತಪಡಿಸಿರುವ ಆಂಗಿಕ ಭಾಷೆ, ಜೊತೆಗಿದ್ದ ಗದ್ದಿಗೌಡರ್ ಯತ್ನಾಳರ ಮಾತಿಗೆ ನಕ್ಕಿದ್ದು ಗುರುಪೀಠ ಹಾಗೂ ಸಮುದಾಯದ ಜನರಿಗೆ ನೋವುಂಟು ಮಾಡಿದೆ, ಸನಾತನ ಧರ್ಮದ ಬಗ್ಗೆ ಪ್ರಸಂಶೆ ವ್ಯಕ್ತಪಡಿಸುವವರೆ ಕಾವಿಧಾರಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯೆ ಎಂದು ಪ್ರಶ್ನಿಸಿದರು.

ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ 

ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ವಾಸ್ತವ ಅರಿಯದೆ ಟೀಕೆ ಮಾಡುವುದು ಶೋಬೆ ತರುವುದಿಲ್ಲ, ದೊಡ್ಡ ನಾಯಕರಾಗಿ ಬೆಳೆಯಬೇಕಾದ ಯತ್ನಾಳರು ಒಮ್ಮೆ ಮಠಕ್ಕೆ ಭೇಟಿ ನೀಡಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಮಾತನಾಡಲಿ ಎಂದು ಹೇಳಿದರು.

ಖರ್ಚು, ವೆಚ್ಚ ಲೆಕ್ಕ ಪಾರದರ್ಶಕ

ಗುರುಪೀಠದ ಆಡಳಿತಾಧಿಕಾರಿ ಡಾ.ರಾಜಕುಮಾರ್ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ನಾಡಿನ ಎಲ್ಲಾ ಮಠ, ಮಾನ್ಯಗಳಿಗೂ ಆಗಾಗ್ಗೆ ಅನುದಾನ ನೀಡಿದ್ದು ಅದೇ ರೀತಿ ಈ ಮಠಕ್ಕೂ ನೀಡಿದೆ. ಅನುದಾನ ಪೀಠದ ಟ್ರಸ್ಟಿಗೆ ಬಂದಿದೆಯೆ ಹೊರತು ಶ್ರೀಗಳಿಗೆ ಬಂದಿಲ್ಲ, ಖರ್ಚು, ವೆಚ್ಚ ಲೆಕ್ಕ ಪಾರದರ್ಶಕವಾಗಿದ್ದು ಯತ್ನಾಳರು ಪರಿಶೀಲಿಸಬಹುದಾಗಿದೆ ಎಂದರು.

ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ

ಗುರುಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್ ಮಾತನಾಡಿ, ಪಂಚಮಸಾಲಿ ಸಮುದಾಯದ ಮುಖಂಡರಿಗೆ ಲೋಕಸಭಾ ಟಿಕೆಟ್ ಅಗತ್ಯದ ಸಂಖ್ಯೆಯಲ್ಲಿ ನೀಡಿರಿ ಎಂದ್ದು ತಪ್ಪೆ, ಪಕ್ಷಾತೀತವಾಗಿ ಪಂಚಮಸಾಲಿ ಸಮುದಾಯದ ಹಿತಕ್ಕೆ ಶ್ರಮಿಸುತ್ತಿರುವ ಮಠದ ಬಗ್ಗೆ, ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದರೆ ಯತ್ನಾಳರ ಮನೆ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ

ವಚನಾನಂದ ಶ್ರೀಗಳು ಮಾತನಾಡಿ, ಶೇ.10 ರಷ್ಟು ಜನಸಂಖ್ಯೆ ಇರುವ ವೀರಶೈವ ಸಮುದಾಯದವರಿಗೆ ಬಿಜೆಪಿಯು ಮುಖ್ಯಮಂತ್ರಿ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ಇತ್ಯಾದಿ ನೀಡಿದೆ, ದೊಡ್ಡ ಸಮುದಾಯವಾದ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ಎಸಗಿರುವುದು ವಾಸ್ತವ. ಮಠವು ಯಾವ ಪಕ್ಷದ ಪರ ಅಥವಾ ವಿರುದ್ಧವಿಲ್ಲ, ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನ, ಮಾನ ನೀಡಿರಿ ಎಂದು ಆಗ್ರಹಿಸಿದ್ದೇವೆ, ಆದರೆ ಯತ್ನಾಳರು ಸಣ್ಣತನ ಪ್ರದರ್ಶಿಸುತ್ತಿದ್ದಾರೆ, ತ್ರಿವಿಧ ದಾಸೋಹ ನೀಡುತ್ತಾ ಮಠವು ಅಲ್ಪಾವಧಿಯಲ್ಲಿ ಕಂಡಿರುವ ಅಭಿವೃದ್ಧಿಯನ್ನು ಅವರು ಗಮನಿಸಬೇಕೆಂದರು.

ಸುದ್ದಿಗೋಷ್ಟಿಯಲ್ಲಿ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸಮುದಾಯದ ಮುಖಂಡರಾದ ಪ್ರಕಾಶ್ ಪಾಟೀಲ್, ಶಂಕರಗೌಡ ಪಾಟೀಲ್, ವಸಂತಮ್ಮ ಹುಲ್ಲತ್ತು, ರಶ್ಮಿ ಕುಂಕದ್, ಮಂಜಣ್ಣ, ಹಾಲೇಶ್ ಗೌಡ, ಭಿಷ್ಟನಗೌಡ, ಪರಮೇಶ್ ಪಟ್ಟಣಶೆಟ್ಟಿ ಹಾಗೂ ಇತರರಿದ್ದರು.

TAGGED:dinamaana.comKannada NewsVachanananda Shri of Panchamasali Gurupeeth.ಕನ್ನಡ ನ್ಯೂಸ್‌ದಿನಮಾನ.ಕಾಂಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ.
Share This Article
Twitter Email Copy Link Print
Previous Article ceo davanagere ಸರ್ಕಾರಿ ಐಟಿಐ ಕಾಲೇಜಿನಿಂದ ಚುನಾವಣಾ ಮತದಾನ ಜಾಥಾ
Next Article Zilla Panchayat ಮತದಾನ ಜಾಗೃತಿಗೆ ಫ್ಯಾಶನ್ ಶೋ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Harihara | ರಾಜ್ಯ ಮಟ್ಟದ ದೇಹಧಾರ್ಢ್ಯ ರಾಜ್ಯ ಸ್ಪರ್ಧೆ : ರಾಹುಲ್ ಮೆಹರ್ವಾಡೆಗೆ ಪ್ರಥಮ ಸ್ಥಾನ

ಹರಿಹರ (Harihara):  ಮೈಸೂರಿನಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್, ಆಕ್ಸಿಜನ್ ಫಿಟ್‍ನೆಸ್ 365, ಸೂಪರ್‍ನೋವಾ ಫಿಟ್‍ನೆಸ್ 365 ಹಾಗೂ…

By Dinamaana Kannada News

ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ವಂಚನೆ : ಪೌರಾಯುಕ್ತ, ಕಂದಾಯ ನಿರೀಕ್ಷಕರ ವಿರುದ್ಧ ಪ್ರಕರಣ ದಾಖಲು

ಹರಿಹರ (Harihara) : ಹರಿಹರ ನಗರಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಸಾರ್ವಜನಿಕರಿಗೆ ವಂಚನೆ ಪೌರಾಯುಕ್ತ ಹಾಗೂ ಕಂದಾಯ ನಿರೀಕ್ಷಕರ…

By Dinamaana Kannada News

ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ

ಹರಿಹರ:  ಕಲಬೆರಕೆ, ಆಸುರಕ್ಷಿತ ಮತ್ತು ಗುಣಮಟ್ಟವಿಲ್ಲದ ಆಹಾರ ತಯಾರಿಕೆ ಹಾಗೂ ವಿತರಣೆ ಮಾಡುವುದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಆಪರಾಧವಾಗಿರುತ್ತದೆ…

By Dinamaana Kannada News

You Might Also Like

arrest
ತಾಜಾ ಸುದ್ದಿ

crime news | ರೌಡಿಶೀಟರ್ ಕಣುಮನ ಕೊಲೆ ಪ್ರಕರಣ : 10 ಆರೋಪಿಗಳು ಆಂದರ್

By Dinamaana Kannada News
Lokayukta Davanagere
ತಾಜಾ ಸುದ್ದಿ

Lokayukta | ಒಳಚರಂಡಿ ಮಂಡಳಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

Harihara | ರೈಲು ಗಾಡಿಗೆ ಸಿಲುಕಿ ವೃದ್ದೆ ಸಾವು

By Dinamaana Kannada News
Davanagere
ತಾಜಾ ಸುದ್ದಿ

Davanagere | ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?