ಸುಪ್ರೀಮ್ ಕೋರ್ಟಿನ ಗ್ರೀನ್ ಬೆಂಚ್ ಬೀಸಿದ ಚಾಟಿ ಏಟಿನ ಪರಿಣಾಮವಾಗಿ,ಅಪರಿಮಿತ ಆದಾಯದ ಕಾರ್ಪೋರೇಟ್ ಕಂಪೆನಿಗಳಿಗೂ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯನ್ನು ಫಿಕ್ಸ್ ಮಾಡಲಾಗಿದೆ.
Corporate environmental responsibility (CER) ಅಡಿಯಲ್ಲಿ , ಗಾಳಿಯ ಗುಣಮಟ್ಟ ಪರಿಸರ ನಿರ್ವಹಣೆ , ಅರಣ್ಯೀಕರಣ , ಹೂಳು ತುಂಬುವ ಟ್ಯಾಂಕ್, ಹಳ್ಳ, ನಾಲೆಗಳಲ್ಲಿ ಹೂಳು ತೆಗೆಯುವಿಕೆ , ಅರಣ್ಯ ಅಗ್ನಿ ಆಕಸ್ಮಿಕಗಳ ತಡೆ ಯೋಜನೆ, ಅರಣ್ಯ ಭದ್ರತಾ ಕೆಲಸ ತಾಂತ್ರಿಕ ಕೆಲಸ, ಇವುಗಳಿಗೆಂದು ಇಂತಿಷ್ಟು ಪ್ರಮಾಣದ ಅನುದಾನವನ್ನು ಗುತ್ತಿಗೆದಾರರು ಕಡ್ಡಾಯವಾಗಿ ಕೊಡಬೇಕಾಗುತ್ತದೆ.
ಹಾಗೆಯೇ, ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿಯಡಿ (Corporate social responsibility) ಯಲ್ಲಿ ಗಣಿ ಗುತ್ತಿಗೆದಾರರು, ಹಳ್ಳಿಗಳಲ್ಲಿನ ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಸಲುವಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಸ್ವ -ಸಹಾಯ ಗುಂಪುಗಳ ತರಬೇತಿಗಾಗಿ, ಗ್ರಾಮ ತೋಟ ನಿರ್ವಹಣೆಗಾಗಿ, ಮೂಲಭೂತ ಸೌಕರ್ಯಗಳಿಗೆ, ರಾಷ್ಟ್ರೀಯ ಪರಂಪರೆ ಸಂರಕ್ಷಣೆಗಾಗಿ ಕ್ರೀಡೆ ಮತ್ತು ಕ್ರೀಡೆಯ ಪ್ರೋತ್ಸಾಹಕ್ಕಾಗಿ, ಹೀಗೆ ,.. ಮತ್ತು ಪರಿಸರ ನಿರ್ವಹಣಾ ಯೋಜನೆಗಳಿಗೆಂದು ಕಂಪೆನಿಗಳು ಯೋಜನೆಗಳನ್ನು ರೂಪಿಸಿ,ಅನುಷ್ಟಾನಕ್ಕೆ ತರಬೇಕು.
ಆದರೆ,ಗಣಿ ಕಂಪೆನಿಗಳ ಅಂಕದ ಪರದೆ ಬೀಳುವವರೆಗೂ ನಾಟಕ ನೋಡುವುದರಲ್ಲಿ ಮೈಮರೆತಿದ್ದವರಿಗೆ ಇವುಗಳ ಪರಿವೆಯೇ ಇರುವುದಿಲ್ಲ. ಲೋಕದ ಗಾಲಿಗಳು ಹೇಗೋ ಚಲಿಸುತ್ತಿರುತ್ತವೆ.
ಬಿ.ಶ್ರೀನಿವಾಸ