ಹರಿಹರ: ಗೋವಾದ ಡೆಕಾಥ್ಲಾನ್ ಆವರಣದಲ್ಲಿ ತಮಿಳುನಾಡಿನ ಸ್ಕೂಲ್ ಗೇಮ್ಸ್, ಸ್ಪೋಟ್ರ್ಸ್ ಡೆವಲಪಮೆಂಟ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆಯಿಂದ ಮೇ 31 ಮತ್ತು ಜೂ.1 ರಂದು ಆಯೋಜಿಸಿದ್ದ 5ನೇ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಯ ಯೋಗಾಸನ ವಿಭಾಗದಲ್ಲಿ ಇಲ್ಲಿನ ಸಪ್ತರಿಷಿ ಯೋಗಾದಾರ್ ಸ್ಪೋಟ್ರ್ಸ್ ಅಕಾಡಮಿಯ ಕ್ರೀಡಾಪಟುಗಳಿಗೆ ಐದು ಚಿನ್ನದ ಪದಕ ದೊರೆತಿದೆ.
ವಿವರ: 14ನೇ ವಯಸ್ಸಿನ ಬಾಲಕರ ವಿಭಾಗದಲ್ಲಿ ಹರಿಹರದ ಪ್ರಥಮ್ ಯು., ಬಾಲಕಿಯರ ವಿಭಾಗದಲ್ಲಿ ಶ್ರೇಯ ಶಿವಪೂಜಿ, 17 ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಮೀನಾಕ್ಷಿ, 49 ವಯಸ್ಸಿನ ಹಿರಿಯ ಪುರುಷರ ವಿಭಾಗದಲ್ಲಿ ಧಾರವಾಡದ ಮಯೂರಗೌಡ ಎಸ್.ಪಾಟೀಲ್, 60 ವರ್ಷ ವಯಸ್ಸಿನ ಹಿರಿಯ ಪುರುಷರ ವಿಭಾಗದಲ್ಲಿ ಕೆ.ಜೈಮುನಿ ಇವರು ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕ ಪಡೆದಿದ್ದಾರೆಂದು ಸಪ್ತರಿಷಿ ಯೋಗಾದಾರ್ ಸ್ಪೋಟ್ರ್ಸ್ ಅಕಾಡಮಿಯ ಮುಖ್ಯಸ್ಥ ಕೆ.ಜೈಮುನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.