Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere news | ವ್ಯಸನಗಳಿಂದ ದೂರವಾಗಿ, ಉತ್ತಮ ಶಿಕ್ಷಣ ಪಡೆಯಿರಿ : ನ್ಯಾ.ಮಹಾವೀರ ಮ.ಕರೆಣ್ಣವರ
ತಾಜಾ ಸುದ್ದಿ

Davangere news | ವ್ಯಸನಗಳಿಂದ ದೂರವಾಗಿ, ಉತ್ತಮ ಶಿಕ್ಷಣ ಪಡೆಯಿರಿ : ನ್ಯಾ.ಮಹಾವೀರ ಮ.ಕರೆಣ್ಣವರ

Dinamaana Kannada News
Last updated: August 24, 2024 1:04 am
Dinamaana Kannada News
Share
DAVANAGERE
DAVANAGERE
SHARE

ದಾವಣಗೆರೆ (Davangere District) ; ಭಾರತ ಜನಸಂಖ್ಯೆ, ಯುವ ಸಂಪತ್ತು, ಅರ್ಥೈಸುವಿಕೆಯಲ್ಲಿ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಸಂಪತ್ತು ಸದ್ಬಳಕೆಯಾಗಬೇಕು, ಇದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿದು ಕಲಿಯುವ ಶಿಕ್ಷಣ ಜೀವನಕ್ಕೆ ಮಾರ್ಗಸೂಚಿ ಮತ್ತು ಸದುಪಯೋಗವಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣ ವರ ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಆನಗೋಡು ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿ (Anagodu G. Channappa Pre-Graduation College) ನಲ್ಲಿ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (District Legal Services Authority) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ  ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ “ಕಲಿಕಾಸಕ್ತಿ ಮತ್ತು ದುಶ್ಚಟಗಳಿಂದ ದೂರ ಉಳಿಯುವ” ಕುರಿತು ಏರ್ಪಡಿಸಲಾದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣದ ಹಂತಗಳಲ್ಲಿ ಕಲಿಕಾಸಕ್ತಿ ಮೂಡಿಸುವುದು ಬಹಳ ಅಗತ್ಯವಾಗಿರುತ್ತದೆ. ಇದರಿಂದ ಮಕ್ಕಳಲ್ಲಿನ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಹೆಚ್ಚಿನ ಸಹಕಾರಿಯಾಗಲಿದೆ. ವಿವಿಧ ಹಂತದ ತರಗತಿಗಳ ಪಠ್ಯಕ್ರಮಗಳು ಸಾಮಾಜಿಕ, ಆರ್ಥಿಕ, ವ್ಶೆಜ್ಞಾನಿಕ ಬದಲಾವಣೆ ಆದಂತೆ ಪರಿಷ್ಕರಣೆಗೆ ಒಳಗಾಗಲಿದ್ದು ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೆ ಸೀಮಿತವಾಗಿ ವ್ಯಾಸಂಗ ಮಾಡದೆ, ವಿಷಯ ಅರ್ಥೈಸಿಕೊಂಡು ಜೀವನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಓದಬೇಕು ಎಂದರು.

Read alaso : Davangere news | ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

ವಿದ್ಯಾರ್ಥಿಗಳಿಗೆ ಹಿಂದೆ ಗುರು, ಮುಂದೆ ಗುರಿ ಇರಬೇಕೆಂಬಂತೆ ವಿದ್ಯಾರ್ಥಿ ಜೀವನವಿರಬೇಕು, ಇದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಮದ್ಯ, ಧೂಮಪಾನ, ಮಾದಕ ವಸ್ತುಗಳ ಸೇವೆನೆಯಷ್ಟೆ ದುಶ್ಚಟವಲ್ಲ, ಅನಾವಶ್ಯಕ ಮೊಬೈಲ್ ಬಳಕೆ, ಸುಳ್ಳು ಹೇಳುವುದು, ಪೋಷಕರು ನೀಗಿಸದೇ ಇರುವಂತಹ ದುಬಾರಿ ವಸ್ತುಗಳು ಬೇಕೆಂದು ಒತ್ತಾಯ ಮಾಡುವುದು, ಇವೆಲ್ಲವೂ ಮಕ್ಕಳಿಂದ ದೂರವಾಗಿ ಪೋಷಕರ ಅಪೇಕ್ಷೆಗನುಗುಣವಾಗಿ ನಡೆದುಕೊಂಡು ಚನ್ನಾಗಿ ಓದುವ ಮೂಲಕ ತಂದೆ, ತಾಯಿಯ ಋಣ ತೀರಿಸಬೇಕೆಂದು ಶಪಥ ಮಾಡಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲರಾದ ಕಾವೇರಿ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ.ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇತಿಹಾಸ ಉಪನ್ಯಾಸಕರಾದ ಹೆಚ್.ಪಿ.ಯಶವಂತ್ ಕುಮಾರ್, ಮಾತೃಶ್ರೀ ಸಂಸ್ಥೆ ಅಧ್ಯಕ್ಷರಾದ ಕಿರಣ್ ಎ.ಎಲ್ ಕಲಿಕಾಸಕ್ತಿ ಕುರಿತಂತೆ ಮಾತನಾಡಿದರು. ವಿದ್ಯಾರ್ಥಿ ನವೀತಾ ಸ್ವಾಗತಿಸಿದರು, ಮಾತೃಶ್ರೀ ಸಂಸ್ಥೆ ಲಕ್ಷ್ಮಿ.ಪಿ ನಿರೂಪಿಸಿದರು. ಉಪನ್ಯಾಸಕರಾದ ಡಾ; ಅಜ್ಜಯ್ಯ ವಂದಿಸಿದರು.

TAGGED:Davangere District.dinamaana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited Davangere news | ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
Next Article Power outage Davanagere| ಇಂದು ಪಿ.ಜೆ.ಬಡಾವಣೆಯಲ್ಲಿ ವಿದ್ಯುತ್‌ ವ್ಯತ್ಯಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere news | ಪ್ರಾರ್ಚಾಯ ವಿರೂಪಾಕ್ಷಪ್ಪ ಅವರಿಗೆ ಸನ್ಮಾನ

ಹರಿಹರ (Davangere District): ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Govt First Class College harihara) ಪ್ರಾರ್ಚಾಯ ವಿರೂಪಾಕ್ಷಪ್ಪ…

By Dinamaana Kannada News

ಜ.5, 6 ರಂದು ರಾಜ್ಯ ಮಟ್ಟದ ಯುವಜನೋತ್ಸವ : ವಿದ್ಯಾರ್ಥಿಗಳಿಂದ ಬೃಹತ್ ಜಾಥಾ

ದಾವಣಗೆರೆ,ಜ.3(Davanagere) ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಜನವರಿ 5 ಮತ್ತು 6 ರಂದು…

By Dinamaana Kannada News

Political analysis | ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?

ಕೆಲ ದಿನಗಳ ಹಿಂದೆ ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಿಜೆಪಿಯ ವರಿಷ್ಟರು ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಕನ್ನಡಪರ…

By Dinamaana Kannada News

You Might Also Like

Eeshwaramma Higher Primary and High School
ತಾಜಾ ಸುದ್ದಿ

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಸಾಧನೆ ಮಾಡಿ : ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

By Dinamaana Kannada News
Modern Dairy Training
ತಾಜಾ ಸುದ್ದಿ

ದಾವಣಗೆರೆ|ಆಧುನಿಕ ಹೈನುಗಾರಿಕೆ ತರಬೇತಿ

By Dinamaana Kannada News
Power outage
ತಾಜಾ ಸುದ್ದಿ

ದಾವಣಗೆರೆ |ಜು. 26 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Innonext
ತಾಜಾ ಸುದ್ದಿ

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‍ಪೋ 1.0 : ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?