ದಾವಣಗೆರೆ (Davanagere) : ದಾವಣಗೆರೆ : ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ನಾನೂ ಕೂಡ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಜೂನಿಯರ್, ಸೀನಿಯರ್ ಎಂಬ ಪ್ರಶ್ನೆ ಬರಲ್ಲ. ಅಂತಹ ಸಂದರ್ಭ ಬಂದರೆ ನಾನೂ ಕೂಡ ಸ್ಪರ್ಧೆ ಮಾಡುತ್ತೇನೆ. ಸಿದ್ದರಾಮಯ್ಯ ಅವರು ಒಳ್ಳೇಯ ಆಡಳಿತ ಮಾಡುತ್ತಿದ್ದಾರೆ. ಹೈಕಮಾಂಡ್ ಆರ್ಶೀವಾದ ಇರುವರೆಗೂ ಅವರೇ ಸಿಎಂ. ಕೆಲವರು ಬಾರಿಗೆ ಬಂದಂತೆ ಮಾತನಾಡುತ್ತಾರೆ. ಅದರಿಂದ ಏನು ಪ್ರಯೋಜನವಿಲ್ಲ. ಇದರಿಂದ ಅವರು ಹೆಸರು ಕೆಡುತ್ತೆ ಅಷ್ಟೇ ಎಂದರು.
Read also : Davanagere | ಇಬ್ಬರು ನಕಲಿ ವೈದ್ಯರಿಗೆ ತಲಾ ಲಕ್ಷ ರೂ.ಗಳ ದಂಡ
ಯಾರಿಗೆ ಬಹುಮತ ಸಿಗುತ್ತೋ ಹಾಗೂ ವರಿಷ್ಠರು ಒಪ್ಪಿಗೆ ಯಾರಿಗೆ ನೀಡುತ್ತಾರೋ ಅವರು ಸಿಎಂ ಆಗುತ್ತಾರೆ ಎಂದು ಹೇಳಿದರು.