ದಾವಣಗೆರೆ (Davanagere) : ಕೊಟ್ಟ ಸಾಲ ಮರಳಿ ವಾಪಸ್ ಕೊಡುವಂತೆ ಕೇಳಿದ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ ಘಟನೆಯೊಂದು ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಸ್‌ಪಿಎಸ್ ನಗರದ ನಿವಾಸಿ ಮುಬೀನಾ ಬಾನು (35) ಕೊಲೆಯಾದ ಮಹಿಳೆ. ನೂರ್ ಅಹಮ್ಮದ್ ಬಂಧಿತ ಆರೋಪಿ.
ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಬೀನಾ ಬಾನು, ನೂರ್ ಅಹಮ್ಮದ್ ಅವರಿಗೆ ಪರಿಚಯವಾಗಿದ್ದ. ನೂರ್ ಅಹಮ್ಮದ್, ಮುಬೀನಾ ಬಾನು ಬಳಿ ಸಾಲ ಪಡೆದಿದ್ದ. ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು. ಕೊಟ್ಟ ಸಾಲ ಮರಳಿಸುವಂತೆ ಮುಬೀನಾ ಬಾನು ಕೇಳಿದ್ದಳು.
ಇದರಿಂದ ಕೆರಳಿದ್ದ ನೂರ್ ಅಹಮ್ಮದ್, ಮುಬೀನಾ ಬಾನು ಅವರೊಂದಿಗೆ ಜಗಳ ಮಾಡಿದ್ದಾನೆ. ಈ ಸಂದರ್ಭದಲ್ಲಿ ನೂರ್ ಅಹಮ್ಮದ್ ಮುಬೀನಾಗೆ ಹೊಡೆದಿದ್ದು, ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ನಂತರ ಮುಬೀನಾ ಬಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಲು ಯತ್ನಿಸಿದ್ದಾನೆ.
ಪೊಲೀಸರು ನೂರ್ ಅಹಮ್ಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.