Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ
ಅಭಿಪ್ರಾಯ

ಚೂರು ಬಿಂಬ-ಗಟ್ಟಿ ಬಂಧದ ಮನುಷ್ಯ ಶೋಧದ ಕಥನ|ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸ

ಬಿ.ಶ್ರೀನಿವಾಸ
Last updated: February 7, 2026 3:32 am
ಬಿ.ಶ್ರೀನಿವಾಸ
Share
B.sreenevasa
SHARE

ಬದುಕಿನ ಸಂಕೀರ್ಣತೆಯನ್ನು ಶೋಧಿಸುತ್ತಲೇ,ಬದುಕಿನ ತಣ್ಣನೆಯ ಕ್ರೌರ್ಯವನ್ನು, ಮನುಷ್ಯನ ಸಿಟ್ಟು, ಆಕ್ರೋಶವನ್ನು ವಿಷಾದಕ್ಕೆ ಇಳಿಸಿಬಿಡುವಂತೆ ಬರೆಯಬಲ್ಲ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್ ರ ಎರಡನೆಯ ಕಥಾಸಂಕಲನ ”ಚೂರು ಬಿಂಬ“ತನ್ನ ಭಾವ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಗಮನಸೆಳೆಯುತ್ತದೆ.

ಕಥೆಗಳಲ್ಲಿನ  ಭಾವತೀವ್ರತೆ ಮತ್ತು ಸಂಕೀರ್ಣವೆನ್ನಿಸಿದ ನಿರೂಪಣಾ ತಂತ್ರದಿಂದಾಗಿ ಓದುಗನನ್ನು ಅಷ್ಟು ಸುಲಭವಾಗಿ ಹೊರಬಿಡಲಾರದ ಗಟ್ಟಿಬಂಧವನ್ನು ಕಥನದಲ್ಲಿ ಕಟ್ಟಿಕೊಡುವಲ್ಲಿ  ಜೈಮನ್ ಯಶ ಸಾಧಿಸಿದ್ದಾರೆ.

ಸಂಕಲನದ ‘ನದಿ’ ಎಂಬ ಕಥೆಯಲ್ಲಿ “ನೋಡು,ನೀನು ಈಜು ಕಲಿಬೇಕು ಅಂದ್ರೆ ನೀರನ್ನು ಮೊದ್ಲು ಪ್ರೀತಿಸ್ಬೇಕು.ಹಾಗಾಗಬೇಕಾದರೆ ಮೊದಲು ನೀರನ್ನು ನಂಬಬೇಕು” ಎಂದು ನಡುಹರೆಯದ ಮನುಷ್ಯ ನೊಬ್ಬ ಹುಡುಗನಿಗೆ ಹೇಳಿದ ಮಾತು ಬದುಕಿಗೂ ಹೇಳಿದಂತೆ ಮಾರ್ದನಿಸುತ್ತದೆ.

ಈಜುಗೊಳದಲ್ಲಿ ಅಂಗಾತವಾಗಿ ಈಜುವಾಗ  ಅನಂತ ಆಕಾಶವನ್ನೊಮ್ಮೆ ದಿಟ್ಟಿಸುತ್ತಾನೆ.ಆಕಾಶ ಅನಂತ ವೆನಿಸುತ್ತದೆ.ಚಲಿಸುವ ಮೋಡದ ಪ್ರತಿಬಿಂಬಗಳು ತನ್ನ ಈಜು ಗೊಳದಲ್ಲೂ ಬಿದ್ದಿರುವುದು ಅವನ ಅರಿ ವಿಗೆ ಬರುತ್ತದೆ.ತಾನೀಗ ಆಕಾಶದಲ್ಲಿ ತೇಲುತ್ತಿರುವೆನೋ… ಅಥವಾ ನೀರಿನಲ್ಲೋ…? ಎಂಬ ಯೋಚನೆಗೆ ಪುಳಕಗೊಳ್ಳುತ್ತಾನೆ.

ಮರುಕ್ಷಣವೇ ತಾನು ಯಾರೆಂದು ಗೊತ್ತಿರದ ಅಥವಾ ಜೀವವೇ ಇಲ್ಲದೆ ತೇಲಿ ಹೋಗುತ್ತಿರುವ ಒಂಟಿ ಹೆಣ ಎನಿಸಿಬಿಡುತ್ತದೆ….ಆಕಾಶದಲ್ಲಿ ಒಂಟಿಯಾಗಿ ಹಾರುವ ಹಕ್ಕಿ ಕಾಣುತ್ತದೆ.ತಾನು ಆ ಹಕ್ಕಿಯ ಪ್ರತಿಬಿಂಬವೇನೋ…

Read also : ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು

ಹೀಗೆ,ಕಥನ ಕಟ್ಟುವ ಶೈಲಿ,ತಂತ್ರಗಾರಿಕೆ ಮತ್ತು ಬಳಸಿದ ಭಾಷೆಯಿಂದಾಗಿ ಕಥೆಗಳು ನಿಧಾನಕ್ಕೆ ಒಳ ಕ್ಕಿಳಿಯುತ್ತವೆ. ‘ತಾಹಾನ ಪತ್ರ’ದಲ್ಲಿಯಂತೂ ಪಾತ್ರಗಳು ಮಾನವೀಯ ಬಂಧಗಳ ಹಂತಗಳನ್ನು ಶೋಧಿಸುತ್ತವೆ.

‘ಅಪ್ಪನ ಕತ್ತರಿ’ಯಲ್ಲಿನ ತಣ್ಣನೆಯ ಹಿಂಸೆ,ಕ್ರೌರ್ಯ,ಖಾಲಿತನಗಳ ಒಂದೊಂದು ಘಟನೆಗಳನ್ನೂ ಒಂದೇ ಬಿಂದುವಿನಲ್ಲಿ ಸಂಧಿಸುವ ಹಾಗೆ ಸಂಕೀರ್ಣವಾಗಿ ಸಾಗುವ ಕಥೆವಿಷಾದ ಮಡುಗಟ್ಟುವಂತೆ ಮಾಡುತ್ತದೆ.

ಈ ಕಥಾ ಸಂಕಲನದ ಪ್ರತಿ ಪಾತ್ರಗಳು ನಮ್ಮ ಮತ್ತು ನಿಮ್ಮದೇ ಬಿಂಬದೊಂದಿಗಿನ ತಾಕಲಾಟಗಳಂತೆ ಮೂಡಿಬಂದಿವೆ.ಕಥೆಗಳಲ್ಲಿರುವ ಕಲ್ಪನೆಗಳು ವಾಸ್ತವವೂ ಆಗಿ ಮೈದೆಳೆಯುವ ಪರಿ ಬೆರಗು ಮೂಡಿ ಸುತ್ತವೆ.

ಚೂರುಬಿಂಬ-ಕಥಾಸಂಕಲನ 
ಲೇಖಕ:ದಾದಾಪೀರ್ ಜೈಮನ್         
ಕಾವ್ಯ ಮನೆ ಪ್ರಕಾಶನ,ಕಲಬುರ್ಗಿ

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ ಪುಸ್ತಕ ವಿಮರ್ಶೆ:ಬಿ.ಶ್ರೀನಿವಾಸದಿನಮಾನ.ಕಾಂ
Share This Article
Twitter Email Copy Link Print
Previous Article ಸಚಿವ ಕೃಷ್ಣಬೈರೇಗೌಡ ದಶಕಗಳ ಭೂ ವಿವಾದಗಳಿಗೆ ಇತಿಶ್ರೀ : ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ‘ನನ್ನ ಭೂಮಿ’ ಅಭಿಯಾನ: ಸಚಿವ ಕೃಷ್ಣಬೈರೇಗೌಡ
Next Article Applications invited ಕಾನೂನು ಪದವೀಧರರಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Crime news | ಬ್ಯಾಂಕ್ ಸಿಬ್ಬಂದಿಯಿಂದಲೇ ಬಂಗಾರದ ಅಭರಣ ಕಳವು : ಆರೋಪಿ ಸೆರೆ

ದಾವಣಗೆರೆ (Davanagere): ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ಬಂಗಾರದ ಆಭರಣಗಳನ್ನು ಕದ್ದು ಬೇರೆ ಬ್ಯಾಂಕ್‍ಗಳಲ್ಲಿ ಅಡವಿಟ್ಟು ಕೋಟ್ಯಾಂತರ ರೂ ಸಾಲ…

By Dinamaana Kannada News

ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲ|ಚುಕ್ಕೆ ಜಿಂಕೆಗಳು ಮೃತ : ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತರಾಟೆ

ದಾವಣಗೆರೆ: ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲಕ್ಕೆ ಸೋಮವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ಪರಿಶೀಲನೆ ನಡೆಸಿದರು.…

By Dinamaana Kannada News

ಸರ್ಕಾರಿ ಐಟಿಐ ಕಾಲೇಜಿನಿಂದ ಚುನಾವಣಾ ಮತದಾನ ಜಾಥಾ

ದಾವಣಗೆರೆ :  ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್ ಅವರು ಮತದಾನ…

By Dinamaana Kannada News

You Might Also Like

Court
ತಾಜಾ ಸುದ್ದಿ

ಅಪ್ರಾಪ್ತೆ ಅಪಹರಣ,ಅತ್ಯಾಚಾರ:ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

By Dinamaana Kannada News
Davanagere
ತಾಜಾ ಸುದ್ದಿ

ಮಾಕುಂಟೆ ಗೊಲ್ಲರಹಟ್ಟಿಗೆ ನುಗ್ಗಿದ ಕರಡಿ ಭಯಭೀತರಾದ ಗ್ರಾಮಸ್ಥರು

By Dinamaana Kannada News
Judge Mahavir M. Karennavara
ತಾಜಾ ಸುದ್ದಿ

ಮಾರ್ಚ್ 14 ರಂದು ‘ರಾಷ್ಟ್ರೀಯ ಲೋಕ ಅದಾಲತ್’:ಸಾರ್ವಜನಿಕರು ಸದುಪಯೋಗಕ್ಕೆ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಗ್ರಾಮ ಪಂಚಾಯತ್‍ಗಳ ಸ್ವಾಯತ್ತತೆ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?