ಅತಿರಥ ಮಹಾರಥರಿಗೆ ಮಣ್ಣು ತಿನ್ನಿಸಿ.
ವಿಶ್ವದ ನಕ್ಷೆಯಲ್ಲಿ ಚಾಪು ಮೂಡಿಸಿ.
ಸರಳ ಗುಣದಿಂದಲೇ ಮಹಾನ್ ಎನ್ನಿಸಿ.
ಸಾಧಕೀಯರ ಸಾಧನೆಯ ನಾನಿಂದು ವಿಸ್ತರಿಸಿ.
ಬ್ರಿಟಿಷ ಸಾಮ್ರಾಜ್ಯದ ನಿದ್ದೆ ಕೆಡಿಸಿ
ಸ್ವಾತಂತ್ರ್ಯ ಪಡೆಯುವ ಕಿಡಿ ಹೊತ್ತಿಸಿ
ಕಿತ್ತೂರಿನ ನೆಲದ ಕೀರ್ತಿ ಬೆಳಗಿಸಿ
ಹೆಸರಾದ ಚೆನ್ನಮ್ಮ ಇತಿಹಾಸ ಸೃಷ್ಟಿಸಿ
ಮಹಿಳಾ ಸೈನ್ಯವ ಸ್ವತಃ ತಯಾರಿಸಿ
ಶಿವಾಜಿಯ ಸೈನ್ಯವ ಹುಟ್ಟಡಗಿಸಿ
ಕೆಚ್ಚೆದಯ ಮಹಿಳೆ ವಿಶ್ವಕ್ಕೆ ಎನ್ನಿಸಿ
ಹೆಸರಾದ ಮಲ್ಲಮ್ಮ ಇತಿಹಾಸ ಸೃಷ್ಟಿಸಿ
ಬ್ರಿಟಿಷ್ ಅಧಿಕಾರಿಗೆ ಚಪ್ಪಲಿ ತೋರಿಸಿ
ಮೇಲಾಧಿಕಾರಿಗಳಿಂದ ಗೌರವಗಿಟ್ಟಿಸಿ
ನಾಗನೂರಿನ ಹೆಸರನ್ನು ಇಂಗ್ಲೆಂಡಿಗೆ ಕಳಿಸಿ
ಹೆಸರಾದ ನಾಗಮ್ಮ ಇತಿಹಾಸ ಸೃಷ್ಟಿಸಿ.
Read also : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:ಹಸಿರೇ ಉಸಿರು|ಡಾ. ಡಿ. ಫ್ರಾನ್ಸಿಸ್
ಡಾ. ರಾಜಕುಮಾರ್ ಅದ್ಭುತ ಅರಸಿ
ಚಿತ್ರರಂಗ ಕಂಡಿರುವ ವಿಶಿಷ್ಟ ಸಾಹಸಿ
ಪ್ರಶಸ್ತಿಗಳ ಸುರಿಮಳೆ ಕಾರ್ಯ ಆಧರಿಸಿ
ಹೆಸರಾದ ಪಾರ್ವತಮ್ಮ ಇತಿಹಾಸ ಸೃಷ್ಟಿಸಿ
ಶತ್ರುಗಳ ಧ್ವನಿಯ ದೂರಿನಿಂದ ಕೇಳಿಸಿ.
ಊಟಕ್ಕೆ ಕುಳಿತ ಪತಿ ಧರ್ಮವ ನಿಭಾಯಿಸಿ.
ಒನಕೆಯಿಂದ ಶತ್ರುಗಳ ಸೈನ್ಯವ ಭೇದಿಸಿ.
ಹೆಸರಾದ ಓಬವ್ವ ಚಿತ್ರದುರ್ಗ ವ ರಕ್ಷಿಸಿ.
ರಚನೆ- ಎನ್ ಎಫ್ ಕಿತ್ತೂರ್. ಶಿಕ್ಷಕರು. ಬೆಳಗಾವಿ
