ಹರಿಹರ (Harihara): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ -ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿಯಲ್ಲಿ ನಿರ್ಮಿಸಲಾದ ಅಕ್ಕ ಕೆಫೆಯನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಯೋಜನೆಗಳಲ್ಲಿ ಒಂದಾದ ಅಕ್ಕ ಕೆಫೆ ಸಂಸ್ಥೆಯು ಇಡೀ ರಾಜ್ಯದಲ್ಲಿ 50 ಕಡೆಗಳಲ್ಲಿ ತೆರೆದಿದ್ದು, ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ ನಗರ ಹಾಗೂ ಹರಿಹರನಗರದಲ್ಲಿ ಆರಂಭವಾಗಿರುವುದು ಸಂತಸ ತಂದಿದೆ ಎಂದರು.
Read also : Davanagere | ಬೆಲೆ ಏರಿಕೆ, ಜನ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ
ಜಿ.ಪಂ ಸಿ.ಇ.ಓ. ಸುರೇಶ್ ಇಟ್ನಾಳ, ತಾಲೂಕು ಅಧಿಕಾರಿಗಳು , ಮಾಜಿ ಶಾಸಕ ಎಸ್ ರಾಮಪ್ಪ. ಕಾಂಗ್ರೆಸ್ ಮುಖಂಡರಾದ ಎನ್. ಹೆಚ್ ನಂದಿಗಾವಿ ಶ್ರೀನಿವಾಸ್, ನಗರಸಭಾ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.