ದಾವಣಗೆರೆ, ಜೂನ್.29: ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ನೇಮಕ ಮಾಡಲು ಅರ್ಜಿ (ಅಂಗನವಾಡಿ ನೇಮಕಾತಿ) ಆಹ್ವಾನಿಸಲಾಗಿದ್ದು ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ( DC Gaugadharaswamy) ಸ್ಪಷ್ಟನೆ ನೀಡಿದ್ದಾರೆ.
ಅಂಗನವಾಡಿ ನೇಮಕಾತಿ
ನೇಮಕಾತಿ ಪ್ರಕ್ರಿಯೆ ನಿಯಮಾವಳಿ ಮತ್ತು ಆದ್ಯತೆ ಅನುಸಾರವಾಗಿ ಮೆರಿಟ್ ಅನ್ವಯ ನಡೆಯಲಿದೆ. ನೇಮಕಾತಿ ಪ್ರಕ್ರಿಯೆ ಸರ್ಕಾರದ ನಿಯಮಗಳ ಪ್ರಕಾರವೇ ನಡೆಯಲಿದೆ. ಆದರೆ ಮಧ್ಯವರ್ತಿಗಳಿಂದಲೇ ನಡೆಯುತ್ತಿದೆ ಮತ್ತು ಹಣದ ಆಮಿಷಗಳಿಂದಲೇ ನೇಮಕಾತಿ ನಡೆಯುತ್ತದೆ ಎನ್ನುವುದು ಸುಳ್ಳು ಮತ್ತು ನಿಯಮಬಾಹಿರ. ಆದ್ದರಿಂದ ಯಾವುದೇ ಮಧ್ಯವರ್ತಿಗಳ ಆಮಿಷಗಳಿಗೆ ಬಲಿಯಾಗಬಾರದು. ಯಾರಾದರೂ ನೇಮಕ ಮಾಡಿಸುತ್ತೇನೆ ಎಂದು ಹಣಕ್ಕಾಗಿ ಆಮಿಷವೂಡ್ಡಿದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಮಾಹಿತಿ ನೀಡಲು ಡಿಸಿ ಜಿ.ಎಂ.ಗಂಗಾಧರ ಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.