Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ
ಅಭಿಪ್ರಾಯ

ಪ್ರಜ್ಞೆಯ ಹಸಿವನ್ನು ಪ್ರತಿನಿಧಿಸಿದ ಅನಿಲ್ ಹೊಸಮನಿಯುವರ ಕಾರ್ಯಕ್ರಮ

Dinamaana Kannada Newsಬಿ.ಶ್ರೀನಿವಾಸ
Last updated: July 14, 2025 3:06 am
Dinamaana Kannada News ಬಿ.ಶ್ರೀನಿವಾಸ
Share
Anil Hosamani
SHARE

Make sure when leaving the world,

Not just you were good,

but leave 

A good world

ನೀನು ಉತ್ತಮವಾಗಿದ್ದ ಬಗ್ಗೆ ಮಾತ್ರವಲ್ಲ-

ಉತ್ತಮಗೊಳಿಸಿ ಜಗತ್ತು ಬಿಡುವಂತೆ ಬದುಕು

– ಕವಿ,ಬರ್ಟೋಲ್ಡ್ ಬ್ರೆಕ್ಟ್ ನ ಈ ಸಾಲುಗಳು ಅನಿಲ್ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ನೆನಪಿಗೆ ಬಂದವು.

ಅನಿಲ್ ಹೊಸಮನಿ ದಲಿತ ಹೋರಾಟಗಾರ, ಸಂಘಟಕ, ಬರೆಹಗಾರ, ಅನುವಾದಕ, ಪತ್ರಕರ್ತ, ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುತ್ತಿರುವ ಎಪ್ಪತ್ತರ ಸನಿಹದಲ್ಲಿರುವ ಅನಿಲ್ ಹೊಸಮನಿ ಯವರ ಬಂಡಾಯ ಏಕಮುಖಿಯಾದುದಲ್ಲ. ಓದು ಮತ್ತು ಚಳವಳಿ ಎರಡನ್ನೂ ಸಮಾನವಾಗಿ ಸ್ವೀಕರಿಸಿದ ಶಿಕ್ಷಣ ಬಹುಮುಖವಾದಾಗ ಮಾತ್ರ ಬಂಡಾಯಕ್ಕೆ ಶಕ್ತಿ ಬರುತ್ತದೆ.

ಚಳವಳಿ ಎನ್ನೋದು ಜಡಗೊಂಡ ದೇಶಕ್ಕೆ ಚಿಕಿತ್ಸೆಯಾಗುತ್ತದೆ. ಆದರೆ ಕೆಲವೊಮ್ಮೆ ಈ ಚಳವಳಿಗಳು ಕೂಡ ಜಡಗೊಂಡಾಗ ವರ್ತಮಾನ ಕ್ರೂರವಾಗುತ್ತದೆ. ಫ್ಯಾಸಿಸ್ಟ್ ವಿರುದ್ಧ ಹೋರಾಡಿ, ಹೋರಾಡಿ, ಕೊನೆಗೊಂದು ದಿನ ತನ್ನದೇ ಫ್ಯಾಸಿಸ್ಟ ಗುಣ ಪಡೆಯುವ ಅಪಾಯವಿರುತ್ತದೆ. ಇಂತಹ ಅಪಾಯಗಳಿಗೆ ಸಿಲುಕದ ಹಾಗೆ ಮೇ ಸಾಹಿತ್ಯ ಬಳಗ ಬಯಲೊಳು ಬಯಲಾಗಿ ಕಾರ್ಯನಿರ್ವಹಿಸುತ್ತಿದೆ. ಅನಿಲ್ ಹೊಸಮನಿ ಈ ಬಯಲಿನ ಅವಿಭಾಜ್ಯ ಅಂಗ.

ಒಂದು ಕಾಲದಲ್ಲಿ, ಒಂದೇ ಒಂದು ಕರೆ ಕೊಟ್ಟರೆ ಸಾಕಿತ್ತು, ಸಾವಿರಾರು ದಲಿತರು ಸೇರುತ್ತಿದ್ದರು ದಸಂಸ ಧ್ವನಿ ದೂರದ ವಿಧಾನಸೌಧದವರೆಗೂ ಕೇಳಿಸುತ್ತಿತ್ತು. ಭೂಮಿ ಮತ್ತು ದಲಿತರ ನಡುವಿನ ಪೋಷಕ ಸಂಬಂಧವನ್ನು ಭಾರತೀಯ ರಾಜಕಾರಣ, ಪ್ರಭುತ್ವಗಳು ಅರ್ಥ ಮಾಡಿಕೊಳ್ಳಲಿಲ್ಲ. ಭಾರತದ ಕ್ಷುದ್ರ ರಾಜಕಾರಣಕ್ಕೆ ಬಲಿಯಾದ ಚಳವಳಿಗೆ ಹಿನ್ನೆಡೆಯಾಯಿತು.

ದಲಿತರು, ಆಗಾಗ ಒಂದಾಗುತ್ತಾರೆ. ಅದೇ ವೇಗದಲ್ಲಿ ಒಡೆದು ಚೂರು ಚೂರಾಗ್ತಾರೆ. ಈ ಹೊತ್ತು ದಲಿತರ ಸಮಸ್ಯೆಗಳೂ ಕೂಡ ಹೆಚ್ಚು ಆಧುನಿಕೀಕರಣಗೊಂಡಿವೆ. ಹಿಂಸೆ ಕೂಡ. ಕೆಲ ತಿಂಗಳುಗಳ ಹಿಂದೆ ನಡೆದ ಕುಂಭಮೇಳದಲ್ಲಿ ಐವತ್ತು ಕೋಟಿ ಜನ ಪುಣ್ಯಸ್ನಾನ ಮಾಡಿದರೆಂದು ಸುದ್ದಿ ಬಿತ್ತರಿಸುವ ಮಾಧ್ಯಮಗಳಿಗೆ, ಇಷ್ಟು ಬೃಹತ್ ಪ್ರಮಾಣದ ಜನರು ಮಲವನ್ನು ಎತ್ತಿದವರಾರೆಂದು ಕೇಳುವುದಿಲ್ಲ. ದುರ್ಬಲಗೊಂಡ ಡಿಎಸ್ಎಸ್ ಕೂಡ ಕೇಳಲಿಲ್ಲ.

ಆದರೆ ಇಂದಿನ ಒಂದು ಸಂತೋಷದ ಸಂಗತಿಯೆಂದರೆ ವಿಭಜಿತ ಬಣಗಳ ಎಷ್ಟೋ ದಲಿತ ಮುಖಂಡರು ಇಂದು ಹಾಜರಿದ್ದರು. ಎಂದೋ ಜಗಳವಾಡಿ ದೂರವಾದ ಅಣ್ಣತಮ್ಮಂದಿರ ಹಾಗೆ ಮತ್ತೆ ಇಲ್ಲಿ ಕುಳಿತಿದ್ದರು.  ಡಿಎಸ್ಸೆಸ್ ಹಿಂದಿನ ಚೈತನ್ಯಕ್ಕೆ ಮತ್ತೆ ಮರಳುತ್ತಿದೆ ಎಂಬುದರ ಸೂಚನೆ ಇದು ಎಂದೇ ನಾನು ಭಾವಿಸಿದ್ದೇನೆ.

ಈ ದಿನ, ನಾವು ಮುಂಜಾನೆ ಹೋರಾಟಗಾರ ಚಂದ್ರಶೇಖರ ಹೊಸಮನಿಯವರ ನಾಲ್ಕನೇ ತಲೆಮಾರಿನ ಸುಕೀರ್ತನಿಂದ (ಅನಿಲ್ ಹೊಸಮನಿಯವರ ಮೊಮ್ಮಗ) ಮನೆ ನಿರ್ಮಾಣಕ್ಕೆ ಚಾಲನೆ ನೀಡಿದೆವು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಲವತ್ತು ವರುಷಗಳ ಕಾಲ ಒಬ್ಬ ದಲಿತ ಪದವೀಧರನಿಗೆ, ಪತ್ರಕರ್ತನಿಗೆ, ಚಳವಳಿಗಾರನಿಗೆ ಒಂದು ಸಣ್ಣ ಮನೆ ಕಟ್ಟಿಕೊಳ್ಳಾಕೂ ಆಗಿಲ್ಲ ಅಂದ್ರೆ , ಇದು ದುರಂತವಲ್ಲದೆ ಮತ್ತೇನು? ಅನಿಲ್ ಹೊಸಮನಿಯವರ ಹೋರಾಟ, ಚಳವಳಿಗಳ ಫಲಿತವನ್ನು ನಾವಿಂದು ಅನುಭವಿಸುತ್ತಿದ್ದೇವೆ.

ಸಮಾನ‌ಮನಸ್ಕ ಗೆಳೆಯರೆಲ್ಲಾ ಸೇರಿ ಅನಿಲ್ ಹೊಸಮನಿಯವರಿಗೆ ಕಟ್ಟುತ್ತಿರುವ ಮನೆಯ ಹೆಸರೇ  ಸಂವಿಧಾನ . ಇದೊಂದು ರೂಪಕವಾಗಿದೆ. ಇದರ ನಿರ್ಮಾಣಕ್ಕೆ ಎಷ್ಟೊಂದು ಮನಸುಗಳು ಕೈಜೋಡಿಸಿವೆ ಎಂಬುದನ್ನು ನೆನೆಸಿಕೊಂಡರೆ ಮೇಲೆ ಹೇಳಿದ ಬ್ರೆಕ್ಟ್ ನ ಮಾತುಗಳಂತೆಯೇ ಇವೆ.  ಇದೇ ಮನೆಯ ಒಂದು ಪುಟ್ಟ ಹಾಲ್ ಅಂಬೇಡ್ಕರ್ ಪ್ರೆಸ್ ಆಗಿ ಕಾರ್ಯಾರಂಭ ಮಾಡಲಿದೆ. ಆ ಮೂಲಕ ಬಹುಜನ ನಾಯಕ ಮತ್ತೆ ಬರ್ತಾರೆ.

ಈ ಕಾಲದಲ್ಲಿ ಸಂವಿಧಾನ ಹೆಸರಿನ ಪುಟ್ಟ ಮನೆಯೊಂದನ್ನು ಚಳವಳಿಗಾರನಿಗೆ ಸಮಾನಮನಸ್ಕ ಗೆಳೆಯರೆಲ್ಲ ಸೇರಿ ಕಟ್ಟಿಸುವುದು, ಸಮೂಹದ ಒಂದು ಭಾಗ. ಮನುಷ್ಯ ಸಮುದಾಯದ ಜವಾಬ್ದಾರಿ ಕೂಡ ಹೌದು. ನಮ್ಮ ಮಾತು ಮತ್ತು ಕ್ರಿಯೆಗಳು ನಮ್ಮ ಸಮಕಾಲೀನರಿಗೆ ಅರ್ಥವಾಗುವಂತೆ ಇರಬೇಕು. ಹಾಗಾದಲ್ಲಿ ಮಾತ್ರ ಜನಪರ ಚಳವಳಿಗಳು ಗೆಲ್ಲುತ್ತವೆ. ಇಂತಹದೊಂದು ಅರ್ಥಪೂರ್ಣ ಮತ್ತು ಕಾಲದ ಅಗತ್ಯತೆಯ ಕಾರ್ಯಕ್ರಮವನ್ನು ಆಯೋಜಿಸಿದ ಮೇ ಸಾಹಿತ್ಯ ಬಳಗದ ಬಸೂ ಮತ್ತು ಗೆಳೆಯರ ಕಾರ್ಯ ಅನುಕರಣೀಯವಾದುದು

ಚಳವಳಿಯಲ್ಲಿ ಧುಮುಕಿದವರು ಬಹಳ ಮಂದಿ ಇದ್ದಾರೆ. ಆದರೆ ಚಳುವಳಿಯನ್ನೇ ಒಂದು ‘ಪ್ರಾರ್ಥನೆ’ಯನ್ನಾಗಿ ಮಾಡಿಕೊಂಡ ಅನಿಲ್ ಹೊಸಮನಿಯಂತವರು ಸಿಗುವುದು ಬಹಳ ಕಡಿಮೆ. ಈ ಹೋರಾಟಗಾರನ ನಾಲ್ಕು ದಶಕಗಳ ಹೋರಾಟದ ಆಳದಲ್ಲಿ ಸಾಂಸ್ಕೃತಿಕ ಹುಡುಕಾಟಗಳಿವೆ. ಜನರ ಬದುಕನ್ನು ಕಟ್ಟುವ ಕ್ರಿಯೆಗಳಿವೆ. ಈ ದಿನದ ಕಾರ್ಯಕ್ರಮ ಅರ್ಥಪೂರ್ಣ ಅಷ್ಟೇ ಅಲ್ಲ, ಚಳವಳಿಗಳನ್ನು ಜನರ ಬಳಿಗೆ ಒಯ್ಯುವ, ಮುಟ್ಟಿಸುವ, ತೆರೆದುಕೊಳ್ಳುವ ಮನಸ್ಸುಗಳನ್ನು ಸೃಷ್ಟಿಸುವ ಕೆಲಸ ಮಾಡಿದೆ.

Read also : ಹೋರಾಟಗಳ ಅಂತಃಕರಣ-ಅನಿಲ್  ಹೊಸಮನಿ: ಬಿ.ಶ್ರೀನಿವಾಸ

ಚಳವಳಿಗಾರ ಯಾವತ್ತೂ ಕೂಡ ಇಂಜಿನಿಯರ್, ಕೃಷಿತಜ್ಞ, ಬುದ್ದಿಜೀವಿ, ಅಧಿಕಾರಿಗಳಿಗಿಂತಲೂ  ಶ್ರಮಜೀವಿ. ಬಸ್ಟ್ಯಾಂಡಿನಲ್ಲಿ ಒಂದು ಪುಟ್ಟ ಬಾಕ್ಸ್ ಇಟ್ಟು, ನಿಮ್ಮ,ನಿಮ್ಮ ದೂರುಗಳನ್ನು,ಕಷ್ಟಗಳನ್ನು ಈ ಪೆಟ್ಟಿಗೆ ಯಲ್ಲಿ ಬರೆದು ಹಾಕಿರಿ – ಅನಿಲ ಹೊಸಮನಿ. ಹೀಗೆ ಬರೆದಿಟ್ಟು ಸಂಜೆ ಹೊತ್ತಿನಲ್ಲಿ ಆ ಪುಟ್ಟ ಪೆಟ್ಟಿಗೆಯ ಪತ್ರಗಳನ್ನು ಹರಡಿಕೊಂಡು ವರದಿ ಮಾಡುವ ಯಾವ ಪತ್ರಕರ್ತ ತಾನೆ ಈ ಹೊತ್ತಿನ ಮಾಧ್ಯಮದಲ್ಲಿದ್ದಾನೆ? ಅನಿಲ್ ಹೊಸಮನಿ ಎಂಬ ಹೊರನೋಟಕ್ಕೆ ಮೌನಿಯಂತೆ ಕಾಣುವ ಇವರು, ಮತ್ತು ಇವರ ಬಾಕ್ಸ್ ಈ ಹೊತ್ತಿಗೆ ಮೆಟಫರ್ ನಂತೆ ಕಾಣಿಸುತ್ತಿದೆ.

ಒಟ್ಟಾರೆ, ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಜೊತೆಗಿನ ಈ ದಿನ ಸಾರ್ವಜನಿಕ ನೈತಿಕತೆಗೊಂದು ನಿದರ್ಶನದಂತಿತ್ತು. ಡಿಎಸ್ಸೆಸ್ ಇಬ್ಭಾಗವಾಗಿದ್ದಾಗ ಖುಷಿಯಿಂದ ವರದಿ ಮಾಡಿದ್ದ ವೃತ್ತಪತ್ರಿಕೆಗಳು, ಯಾವುದೇ ಛಲವಂತ, ಪ್ರಾಮಾಣಿಕ, ಪಾರದರ್ಶಕ ಗುಂಪು ಎಂದಿಗೂ ಇಬ್ಭಾಗವಾಗುವುದಿಲ್ಲ , ನೈಜ ಹೋರಾಟಗಳು ಎಂದಿಗೂ ಸಾಯುವುದಿಲ್ಲ ಎಂಬುದನ್ನು ಮೇ ಸಾಹಿತ್ಯ ಬಳಗ ಕೂಗಿ ಕೂಗಿ ಹೇಳಿದಂತಿತ್ತು.

ಬಿ.ಶ್ರೀನಿವಾಸ

TAGGED:Anil Hosamani is a Dalit activist.Dinamana.comDSSKannada Newsಅನಿಲ್ ಹೊಸಮನಿ ದಲಿತ ಹೋರಾಟಗಾರಡಿಎಸ್ಸೆಸ್
Share This Article
Twitter Email Copy Link Print
Previous Article Sri Sachidananda Saraswati Swamiji ಆಧ್ಯಾತ್ಮಿಕ ಚಿಂತನೆ ಇಲ್ಲದಿದ್ದರೆ ಸ್ವಂತ ಮನೆಯಲ್ಲೇ ಪರಕೀಯತೆ ಕಾಡುತ್ತದೆ : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ
Next Article siddaramaiah,Rahul Gandhi, DK Sivakumar Political analysis | ಸಿದ್ದು ದಿಲ್ಲಿಯಲ್ಲಿ  ಬಾಂಬ್ ಬ್ಲಾಸ್ಟ್ ಮಾಡಿದ್ದೇಕೆ?
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಹಣ ದುರುಪಯೋಗ, ಕರ್ತವ್ಯ ಲೋಪ ಆರೋಪ: ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ಅಮಾನತು

ದಾವಣಗೆರೆ (Davanagere): ಸರ್ಕಾರದ ನಿಯಮಗಳ ಪ್ರಕಾರ ಜವಾಬ್ದಾರಿ ಅರಿತು ತಮ್ಮ ಕರ್ತವ್ಯ ಹಾಗೂ ಹಣ ದುರುಪಯೋಗ , ಹಲವಾರು ಸೇವಾ…

By Dinamaana Kannada News

ಇಂದಿನಿಂದ ಏಪ್ರಿಲ್14 ರವರೆಗೆ “ಸಕ್ಷಮ” ಉಚಿತ ಸಿಇಟಿ ತರಗತಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ.ಮಾ.20: ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ಪಿಯು ವಿದ್ಯಾರ್ಥಿಗಳಿಗೆ “ಸಕ್ಷಮ” ಉಚಿತ ಸಿಇಟಿ ತರಗತಿಗಳು ನಗರದ ನೂತನ ಪದವಿಪೂರ್ವ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 52 : ಪಾಪ ಅವರು ಹಸಿದಿದ್ದರು…

Kannada News | Sanduru Stories | Dinamaana.com | 12-06-2024 ಯಾವ ಬೀದಿ ಸುತ್ತುತ್ತಿದ್ದಾರೋ (Sanduru Stories) ನಿನ್ನೆ…

By Dinamaana Kannada News

You Might Also Like

Alur Ningaraj
ತಾಜಾ ಸುದ್ದಿ

ಮೈಸೂರು ಅಭಿವೃದ್ಧಿಗೆ 2578 ಕೋಟಿ : ದಲಿತ,ಅಹಿಂದ ವರ್ಗಕ್ಕೆ ಕೊಡುಗೆ ಶೂನ್ಯ

By Dinamaana Kannada News
Applications invited for annual financial assistance to weavers
ತಾಜಾ ಸುದ್ದಿ

ನೇಕಾರರಿಗೆ ವಾರ್ಷಿಕ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ

By Dinamaana Kannada News
Davanagere police
ತಾಜಾ ಸುದ್ದಿ

ಶಾಲಾ ಸಂಸತ್ತು ಕೇವಲ ಹಕ್ಕಲ್ಲ ಜವಾಬ್ದಾರಿ : ಎಸ್ಪಿ ಉಮಾ ಪ್ರಶಾಂತ್

By Dinamaana Kannada News
Davanagere
ತಾಜಾ ಸುದ್ದಿ

ಬಿತ್ತನೆ ಬೀಜ, ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ : ಅಂಗಡಿ ತಪಾಸಣೆಗೆ ಸೂಚನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?