ದಾವಣಗೆರೆ : ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವು ಆಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಲ್ಪಸಂಖ್ಯಾತ ಅಥವಾ ಅಹಿಂದ ವರ್ಗದವರಿಗೆ ಆದ್ಯತೆ ನೀಡುವಂತೆ ಜಗಳೂರಿನಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಆಹಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
Read also : ಮೆಕ್ಕೆಜೋಳ ಖರೀದಿ ವ್ಯತ್ಯಾಸದ ಮೊತ್ತ ಪಾವತಿಸಲು ಕ್ರಮ: ಡಿಸಿ
ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ವಖ್ಪ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಘನಿ ತಾಹೀರ್, ಕೆಎಂಡಿಸಿ ಸಿರಾಜ್, ಸಂತೇಬೆನ್ನೂರು ಏಜಾಜ್, ಖಾಸೀಂ ಸಾಬ್, ಹಿರಿಯ ವಕೀಲ ಅಂಜನೇಯ ಗುರುಜೀ , ಜಬ್ಬಾರ್, ನೂರು ಆಹಮದ್, ಜಗಳೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಶುದ್ದೀನ್ ಇತರರು ಇದ್ದರು.
