ದಾವಣಗೆರೆ ಸೆ.30: ದಾವಣಗೆರೆ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ನಾಗರಿಕ ಸೇವಾ ವಲಯ ಹಾಗೂ ನಾಗರಿಕ ಸಮಾಜದ ಸದಸ್ಯರ ಹುದ್ದೆಯ ನೇಮಕಾತಿಗಾಗಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
Read also : ದಾವಣಗೆರೆ|ಅನಧಿಕೃತ ಚರ್ಮರೋಗ ಚಿಕಿತ್ಸಾಲಯಗಳಿಗೆ ದಂಡ ಮತ್ತು ಶಾಶ್ವತ ಬಂದ್ : ಡಿಸಿ
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ನಾಗರಿಕಾ ಸೇವಾ ವಲಯ ಹಾಗೂ ನಾಗರಿಕ ಸಮಾಜದ ಸದಸ್ಯರಾಗಿ ಕಾರ್ಯನಿರ್ವಹಿಸಲು ಇಚ್ಚೆ ಇರುವ ನಾಗರಿಕರು ತಮ್ಮ ಸ್ವ ವಿವರ ಹಾಗೂ ಇತರೆ ವಿವರಗಳೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 18 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ದಾವಣಗೆರೆ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಹಾಗೂ ಪೊಲೀಸ್ ಅಧೀಕ್ಷಕರು, ದಾವಣಗೆರೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-272003 ಸಂಪರ್ಕಿಸಬೇಕೆAದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
