ದಾವಣಗೆರೆ : ದಲಿತರ ಕ್ಷೇಮಾಭಿವದ್ದಿಗಾಗಿ ಡಾ. ಬಾಬು ಜಗಜೀವನ ರಾಮ್ ಹೋರಾಡಿದ್ದರು. ಅಂತಹ ವ್ಯಕ್ತಿಯ ಆದರ್ಶಗಳ ಪಾಲನೆ ನಮ್ಮೆಲ್ಲರಿಂದ ಆಗಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಜಿ. ಶಿವಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 39ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗಜೀವನ ರಾಮ್‍ರವರು ತುಳಿತಕ್ಕೊಳಗಾದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದವರು ಅವರ ಸಾಧನೆಗಳು ಅಪಾರವಾಗಿವೆ ಎಂದರು.
ಟಿ. ರಮೇಶ್ ಮಾತನಾಡಿ, ಜಗಜೀವನ ರಾಮ್ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದರು.
Read also : ಸಂಕಷ್ಟಗಳ ವಿರುದ್ಧ ಸಮರ ಸಾರದೆ ನವ ಸಮಾಜ ಸ್ಥಾಪನೆ ಅಸಾಧ್ಯ : ಹಳೇಬೀಡು ರಾಮಪ್ರಸಾದ್ ಅಭಿಮತ
ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್ ಮಾತನಾಡಿ, ಬಾಬು ಜಗಜೀವನ ರಾಮ್ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಪಾಲಿಕೆ ಮುಂಭಾಗ ಸುಮಾರು 20 ವರ್ಷಗಳ ಹಿಂದೆಯೇ ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಕೊಡಪಾನ ದಾದಾಪೀರ್, ಕಾಂಗ್ರೆಸ್ ಜವಾಹರ್ ಬಾಲ್ ಮಂಚ್ ಅಧ್ಯಕ್ಷ ಮೈನುದ್ದೀನ್, ಸೇವಾದಳದ ಡೋಲಿ ಚಂದ್ರು,ಸುಭಾನ್ ಸಾಬ್, ಮಹಮದ್ ಸಮೀವುಲ್ಲಾ, ಹನುಮಂತರಾಜ್, ವಿನಾಯಕ, ಡಿ.ಆರ್.ಶ್ರೀನಿವಾಸ್ ಕಲ್ಪತರು, ಬಡೇಸಾಬ್, ಮೊಟ್ಟೆ ದಾದಾಪೀರ್, ಅಕ್ಟರ್, ಶ್ರೀನಿವಾಸ್, ಸತೀಶ್, ಕೇರಂ ಗಣೇಶ್, ಕಾಂಗ್ರೆಸ್‍ನ ಸುಧಾರಾಣಿ, ಪುಷ್ಪ ಇತರರು ಇದ್ದರು.