ದಾವಣಗೆರೆ (Davanagere): ತಳ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಪಕ್ಷ ಸಂಘಟನೆ ಮಾಡುವ ಮೂಲಕ ಬಲ ಪಡಿಸಿ, ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೊಡುವಂತೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದ ಯುವ ಘಟಕದ ನೂತನ ಪದಾಧಿಕಗಳಿಗೆ ಕರೆ ನೀಡಿದರು.
ನಗರದ ಗೃಹ ಕಚೇರಿಯ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದಿಂದ ಚುನಾಯಿತರಾದ ನೂತನ ಪದಾಧಿಕಾರಿಗಳಿಗೆ ಶಾಲನ್ನು ಹೊದಿಸಿ ಅಭಿನಂದಿಸಿ ಸೂಚಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದಲ್ಲಿ ಮಹಿಳೆಯ ಸಂಖ್ಯೆ ಕಡಿಮೆ ಇದೆ ಎಂದು ಕಂಡು ಬಂದಿದೆ. ಮುಂಬರುವ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಪಕ್ಷವನ್ನು ಬಲ ಪಡಿಸಬೇಕಿದೆ. ಮಹಿಳಾ ಘಟಕದಲ್ಲಿ ಮಹಿಳೆಯರ ಹೆಚ್ಚು ನೊಂದಾವಣಿ ಮಾಡಿಸಿ ಮಹಿಳಾ ಘಟಕವನ್ನು ಬಲ ಪಡಿಸಬೇಕು ಎಂದರು.
ಚುನಾವಣೆಗಳಲ್ಲಿ ಟಿಕೆಟ್ ಪೈಪೋಟಿ ಸಾಮಾನ್ಯವಾಗಿರುವುದು. ವರಿಷ್ಠರು ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ಆಕಾಂಕ್ಷಿಗಳು, ಟಿಕೆಟ್ ವಂಚಿತರು, ವೈಮನಸ್ಸು ಬಿಟ್ಟು ಒಗ್ಗಟ್ಟು ಪದರ್ಶಿಸಬೇಕು. ಪಕ್ಷವು ಸೂಚಿಸುವ ಅಭ್ಯರ್ಥಿಯನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Read also : ಆಯುಷ್ಮಾನ್ ಭಾರತ್ : ಆರ್ಥಿಕವಾಗಿ ಹಿಂದುಳಿದವರಿಗೂ ಪರಿಗಣಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ