ದಾವಣಗೆರೆ: ಎರೆಗುಂಟೆ ರಸ್ತೆಯ ಅಶೋಕ ನಗರ ಬಳಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ, ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ಮಾದಕ ದ್ರವ್ಯ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಇಬ್ಬರ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ್ (24) ಆದರ್ಶ(25) ಬಂಧಿತ ಆರೋಪಿಗಳು.
ನಗರದ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ನಗರದ ಮುಖ್ಯ ರಸ್ತೆಯ ಹೆಚ್.ಪಿ. ಗ್ಯಾಸ್ ಗೋಡಾನ್ ಸಮೀಪದ ಸಾರ್ವಜನಿಕರ ರಸ್ತೆಯಲ್ಲಿ ಗಸ್ತು ಮಾಡುತ್ತಿರುವ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಜನರಿಗೆ ತೊಂದರೆಯನ್ನುಂಟು ಕೊಡುವ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾದಕ ದ್ರವ್ಯ ಸೇವಿಸಿರುವುದು ವೈದ್ಯರ ಪರೀಕ್ಷೆಯಿಂದ ಖಚಿತವಾಗಿರುವ ಕಾನೂನು ಬಾಹಿರವಾಗಿ ಮಾದಕ ದ್ರವ್ಯ ಸೇವಿಸಿದ್ದ ವ್ಯಕ್ತಿಗಳ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.
ಗಾಂಧಿನಗರ ಪಿಎಸ್ಐ ಸಾಗರ್ ಅತ್ತರ್ ವಾಲ್ ಹಾಗೂ ಮಾದಕ ದ್ರವ್ಯ ನಿಗ್ರಹ ಪಡೆ, ಕೆಟೆಜೆ ನಗರ ಪೊಲೀಸ್ ಠಾಣೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆನಡೆಸಿದ್ದರು.
Read also : ದಾವಣಗೆರೆಗೆ ಐಟಿ ಪಾರ್ಕ್|ಎಸ್ ಟಿಪಿಐ ಅಧಿಕಾರಿಗಳೊಂದಿಗೆ ಸಂಸದರ ಸಭೆ
ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ, ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ ಪಿ ಎಸ್ ಐ ಸಾಗರ್ ಅತ್ತರ್ ವಾಲ್ , ಸಿಬ್ಬಂದಿಗಳಾದ ಪ್ರಕಾಶ್, ಮಂಜುನಾಥ, ಷಣ್ಮಖ, ಶಿವರಾಜ, ಗೋವಿಂದರಾಜ್,ಗಾಂಧಿನಗರ ಠಾಣೆಯ ಪಿ.ಎಸ್.ಐ ರವಿನಾಯ್ಕ್ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಸಂಶಿಸಿದ್ದಾರೆ.