ಜಗಳೂರು : ತಾಲೂಕಿನ ಗುರುಸಿದ್ದಾಪುರದ ಅರಣ್ಯ ಪ್ರದೇಶದಲ್ಲಿರುವ ರಂಗಯ್ಯನದುರ್ಗ ಕೊಂಡ ಕುರಿ ಅಭಯಾರಣ್ಯ ಇಲಾಖೆಯಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆಚರಣೆ ಮಾಡದೇ ಇರುವುದು ಅವರ ಕಾರ್ಯವೈಖರಿಗೆ ಕೈಗನ್ನಡಿ ಹಿಡಿದಂತಾಗಿದೆ ಎಂದು ಬಂಜಾರ ಸಮುದಾಯದ ಮುಖಂಡರಾದ ಧರ್ಮ ನಾಯ್ಕ ದೂರಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ದರ್ಶನಿಕರು ಮತ್ತು ಸಮಾಜ ಸುಧಾರಕರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿದ ಸರಕಾರವು ಪ್ರತಿಯೊಂದು ಸರಕಾರಿ ಕಚೇರಿ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕರ ಜಯಂತಿಯನ್ನು ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದೆ ಆದೇಶ ಕಾಗದಕ್ಕೆ ಸೀಮಿತವಾಗಿದೆ ವಿನಹ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಟ್ಟಡ ಮಾಲೀಕರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರಕ್ಕೆ 96 ರೂ ಕೋಟಿ ಪ್ರಸ್ತಾವನೆ : ಶಾಸಕ ಬಿ.ದೇವೇಂದ್ರಪ್ಪ
ತಾಲೂಕಿನ ಗುರುಸಿದ್ದಾಪುರ ಗ್ರಾಮದ ಅರಣ್ಯದ ತಪ್ಪಲಿನಲ್ಲಿ ರಂಗಯ್ಯನದುರ್ಗ ಕೊಂಡ ಕುರಿ ಅಭಯಾರಣ್ಯದ ವಲಯ ವನ್ಯ ಜಿವಿಧಾಮದ ಕಛೇರಿಯಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಆಚರಣೆ ಮಾಡಿರುವುದಿಲ್ಲ ಆಚರಣೆ ಮಾಡು ವುದು ಒಂದು ಕಡೆ ಇರಲಿ ಆದರೆ ದಾರ್ಶನಿಕರ ಭಾವಚಿತ್ರವು ಸಹ ಕಚೇರಿಯಲ್ಲಿ ಇಲ್ಲದೆ ಇರುವುದು ಚರ್ಚೆಗೆ ಗ್ರಾಸವಾಗುತ್ತಿದೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾದಂತಹ ಅಧಿಕಾರಿಗಳು ಪಾಲಿಸದೆ ಇರುವುದು ವಿಪರ್ಯಾಸದ ಸಂಗತಿ ಯಾಗಿದೆ ಎಂದು ಸತೀಶ್ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ದಿನ ಜಯಂತಿ ಇರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ ಭಾನುವಾರ ರಜೆ ಇರುವುದರಿಂದ ಕೆಲಸದ ಮೇಲೆ ಬೇರೆ ದೇವರಿಗೆ ಬಂದಿದ್ದೇನೆ ಎನ್ನುತ್ತಾರೆಪ್ರಭಾರಿ ಆರ್ ಎಫ್ಓ, ಸತೀಶ್
