ಅ ಆ ಈ ಈ ಓದಿಕೊಂಡು
ಕ ಕಾ ಕಿ ಕೀ ಬರೆದುಕೊಂಡು
ಗೋಲಿಗುಂಡು ಆಡಿಕೊಂಡು
ಪಾಟೀಚೀಲ ತೆಗೆದುಕೊಂಡು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!
ಶಾಲೆ ಸುತ್ತಿ ಕಲಿತು ನಲಿದು
ರೊಟ್ಟಿ ಬುತ್ತಿ ಚಟ್ನಿ ಸವಿದು
ಊರ ಸುತ್ತಿ ನಲಿದು ದಣಿದು
ಸುಯ್ಯೋ ಮಳೆಯಲಿ ಆಡುತ ನೆನೆದು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!
ಚಿನ್ನಿ ದಾಂಡು ಬ್ಯಾಟು ಬಾಲು
ನಾಯಿ ಕುನ್ನಿ ಬಾಲ ಹಿಡಿದು ಎಳೆದ ಕಾಲು
ತಾಯಿ ನಾಯಿ ಬೆಂಬೆತ್ತಾಗ ಕಾಣದಾಯ್ತು ಬೇಲಿಸಾಲು
ಆಟ ಪಾಠಕ್ಕಿಲ್ಲ ಎಲ್ಲೆ
ಇನ್ನೆಲ್ಲಿ ಮೇಲುಕೀಳು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!
ಜುಬ್ಬ ಪೈಜಾಮ್ ಹಾಕಿಕೊಂಡು
ರ ಠಾ ಈ ಕ ಕಲಿತುಕೊಂಡು
ಸಿಂಬಳಗೊಣ್ಣೆ ಒರೆಸಿಕೊಂಡು
ಒಂದು ಎರಡು ಎಣಿಸಿಕೊಂಡು
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!
Read also : ಸ್ತನ ಕ್ಯಾನ್ಸರ್‌ನಲ್ಲೇ ಅಪಾಯಕಾರಿ HER2+: ನಿಖರ ಚಿಕಿತ್ಸೆಯ ಮೂಲಕ ಗುಣಮಟ್ಟದ ಜೀವನ
ಬಾಲ್ಯದ ಕಬ್ಬ ಸವಿದವನೇ ಸುಬ್ಬ
ಕಬ್ಬನು ಕೀಳುವಾಗ
ಹರಿದೇ ಹೋಯ್ತು ಜುಬ್ಬಾ!
ನಲಿಯುತ್ತಾ ಹಾಡುವಾಗ
ಬಂದೇ ಬಿಡ್ತು ಹೋಳಿ ಹಬ್ಬ
ಶಾಲೆಗೆ ಹೊರಟನಿಲ್ಲಿ ನಮ್ಮ ಸುಬ್ಬ!

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
ದಾವಣಗೆರೆ.
