ದಾವಣಗೆರೆ (Davanagere): ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿ ಸಾರ್ವಜನಿಕರಿಗೆ 1.08 ಲಕ್ಷ ರೂ. ವಂಚಿಸಿದ ಆರೋಪಿಗೆ ಒಂದು ವರ್ಷ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಅಂಚೆ ಇಲಾಖೆ ಶಿವಮೊಗ್ಗ ಪೂರ್ವ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಡಿ. ಗಣೇಶ್ ಅವರು ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಅಂಚೆ ಪಾಲಕ ಕೆ.ಆರ್ಗ್. ಶ್ರೀಕಾಂತ್ ಸುಕನ್ಯಾ ಸಮೃದ್ದಿ ಯೋಜನೆಯಡಿಯಲ್ಲಿ ನಾಲ್ಕು ಜನರಿಂದ 1.08 ರೂ. ವಂಚನೆ ಮಾಡಿದ್ದಾರೆ ಎಂದು ಬಸವಾಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು.
ಈ ನಾಗರಿಕರು ಅಂಚೆ ಇಲಾಖೆಗೆ ಮಾಸಿಕವಾಗಿ ಜಮಾಮಾಡಲು ಹಣ ಪಡೆದುಕೊಂಡು ಖಾತೆದಾರರ ಪಾಸ್ ಪುಸ್ತಕದಲ್ಲಿ ದಿನಾಂಕ ಮತ್ತು ಅಂಚೆ ಮುದ್ರೆ ಹಾಕಿ ಹಿಂದುರುಗಿಸಿದ್ದರು. ಆದರೆ, ಪಡೆದುಕೊಂಡ ಹಣವನ್ನು ಅಂಚೆ ಇಲಾಖೆಯ ಲೆಕ್ಕ ಶಿರ್ಷಿಕೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ಜನರಿಗೆ ಮೋಸ ಮಾಡಿದ್ದ.
ತನಿಖೆಯಿಂದ ದೃಢಪಟ್ಟ ಹಿನ್ನಲೆಯಲ್ಲಿ ಶ್ರೀಕಾಂತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಣಾ ಪಟ್ಟಿ ಸಲ್ಲಿಸಿದ್ದರು. ಚನ್ನಗಿರಿಯ ಪ್ರಧಾನ ಸಿಜೆ ಆಂಡ್ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದಲಿಂಗಯ್ಯ .ಬಿ ಗಂಗಾಧರಮಠ ಅವರು ವಾದ-ವಿವಾದ ಆಲಿಸಿ, ಆರೋಪ ಸಾಬೀತಾಗಿದ್ದರಿಂದ ಶ್ರೀಕಾಂತ್ಗೆ ಒಂದು ವರ್ಷ ಆರು ತಿಂಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಂಜವ್ವ ದಾಸರ್ ವಾದ ಮಂಡಿಸಿದ್ದರು.
Read also : ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಡಿಸಿ