ದಾವಣಗೆರೆ (Davanagere): ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ೫೦ನೇ ಸುವರ್ಣ ಮಹೋತ್ಸವ ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ನಗರದ ಪ್ರತಿಷ್ಠಿತ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಅಂತಾರಾಷ್ಟ್ರೀಯ ಯೋಗ ಪಟು ಯೋಗಾಚಾರ್ಯ ಡಾ.ಎನ್.ಪರಶುರಾಮ್ ಅವರಿಗೆ ‘ಚಿತ್ರಸಂತೆ ರಾಜ್ಯೋತ್ಸವ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಯೋಗಾಸನ ಕ್ಷೇತ್ರದಲ್ಲಿ ಸುಮಾರು 28 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದಂತಹ ಡಾ.ಎನ್.ಪರಶುರಾಮ್ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ವಾಸ್ತು ತಜ್ಞ ದಿನೇಶ್ ಗುರೂಜಿ, ಚಲನಚಿತ್ರ ನಿರ್ದೇಶಕ ಮೋಹನ್‌ಕುಮಾರ್, ಚಿತ್ರನಟಿ ಶ್ವೇತಾ ಶ್ರೀವಾತ್ಸವ, ಚಿತ್ರಸಂತೆಯ ಕಾರ್ಯಕ್ರಮದ ರೂವಾರಿ ಗಿರೀಶ್‌ಗೌಡ, ಸಂಗೀತ ನಿರ್ದೇಶಕರು, ಗಾಯಕಿ ಮಾನಸ ವಲ್ಲ ಇದ್ದರು.
ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್, ದಾವಣಗೆರೆ ಎಎಸ್‌ಎಸ್ ಯೋಗ ಫೆಡರೇಷನ್ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಗೋಪಾಲ್ ರಾವ್, ಖಜಾಂಚಿ ಎಸ್.ರಾಜಶೇಖರ್, ನಿರ್ದೇಶಕರಾದ ಜೆ.ಎಸ್.ವೀರೇಶ್, ಎಂ.ವೈ.ಸತೀಶ್, ಅಜ್ಜಯ, ರಾಘವೇಂದ್ರ ಚೌಹಣ್, ರಂಗಪ್ಪ, ನಾಗರಾಜ್, ಸಾವಿತ್ರಮ್ಮ, ಪತ್ರಕರ್ತ ಎ.ಎನ್.ನಿಂಗಪ್ಪ ಹಾಗೂ ಯೋಗ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Read also : ದೇಶದಲ್ಲಿ ಸಮಾನತೆ ತರುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ