ದಾವಣಗೆರೆ (Davanagere); ನಗರದ ಪ್ರಮುಖ ಆಕರ್ಷಣೀಯ ಸ್ಥಳವಾದ ಗ್ಲಾಸ್ ಹೌಸ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಸೂಚನೆಯ ಮೇರೆಗೆ ಸಾರಿಗೆ ವಿಭಾಗದ ಅಧಿಕಾರಿಗಳು ನಗರ ಸಾರಿಗೆ ಸೌಲಭ್ಯ ಕಲ್ಪಿಸಿದ್ದಾರೆ.
ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ ಬೆಳಗ್ಗೆ 10-30, ಮಧ್ಯಾಹ್ನ 12-15 ಹಾಗೂ ಸಾಯಂಕಾಲ 5-35 ಕ್ಕೆ ನಗರ ಸಾರಿಗೆ ಬಸ್ ಸಂಚರಿಸಲಿದೆ .ಅದೇ ರೀತಿ ಗ್ಲಾಸ್ ಹೌಸ್ ನಿಂದ ಮರಳಿ ರೈಲ್ವೇ ನಿಲ್ದಾಣಕ್ಕೆ ಬೆಳಗ್ಗೆ 11-05, ಮಧ್ಯಾಹ್ನ 12-45 ಹಾಗೂ ಸಂಜೆ 6-05 ಕ್ಕೆ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.ಸಂಸದರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.