ದಾವಣಗೆರೆ : ಕುಡಿಯಲು ಹಣ ನೀಡುವಂತೆ ತಾಯಿಯೊಂದಿಗೆ ಗಲಾಟೆ ಮಾಡುತ್ತಿದ್ದ ತಂದೆಯನ್ನು ಕೊಂದ ಮಗನಿಗೆ 01ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000/- ರೂ ದಂಢ ವಿಧಿಸಿದೆ.
06-07-2022 ರಂದು ಚನ್ನಗಿರಿ ತಾಲೂಕಿನ ಕವಳಿತಾಂಡ ಎಸ್‌ಆರ್ ಕ್ಯಾಂಪ್ ಗ್ರಾಮದಲ್ಲಿ ಹೆಂಡತಿ ಶಾರದಮ್ಮ ಜೊತೆ ಕುಡಿಯಲು ಹಣ ನೀಡುವಂತೆ ಮಂಜುನಾಥ ರೆಡ್ಡಿ ಗಲಾಟೆ ನಡೆಸಿದ್ದಾನೆ. ಈ ವೇಳೆ ಮಗ ತಿಪ್ಪೇಶ ಗಲಾಟೆ ಬಿಡಿಸುವ ಸಮಯದಲ್ಲಿ ಮಂಜುನಾಥ ರೆಡ್ಡಿ ಮಚ್ಚು ಹಿಡಿದು ಮಗನ ಜೊತೆ ಗಲಾಟೆ ಮಾಡಲು ಬರುತ್ತಾನೆ. ಅದೇ ಮಚ್ಚಿನಿಂದ ತಂದೆ ಮಂಜುನಾಥ ರೆಡ್ಡಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಾಯಿ ಶಾರದಮ್ಮ ಬಸವಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ತನಿಖೆ ಕೈಗೊಂಡ ತನಿಖಾಧಿಕಾರಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಈ.ಎಸ್ ಆರೋಪಿ ತಿಪ್ಪೇಶ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ವಿಚಾರಣೆ ನಡೆಸಿದ 01ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಾನಂದ ಜೆ.ವಿ ಆರೋಪಿ ತಿಪ್ಪೇಶ ಮೇಲೆ ಆರೋಪ ಸಾಬೀತಾಗಿದ್ದರಿಂದ ಆರೋಪಿತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000/- ರೂ ದಂಢ ವಿಧಿಸಿದರು. ಸರ್ಕಾರಿ ವಕೀಲ ಸತೀಶ್ ಕುಮಾರ್ ಕೆ ಎಸ್ ರವರು ನ್ಯಾಯ ಮಂಡನೆ ಮಾಡಿಸಿದ್ದರು.
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ ತನಿಖಾಧಿಕಾರಿ ಮಹೇಶ್ ಈ.ಎಸ್ , ಪೊಲೀಸ್ ಸಿಬ್ಬಂದಿಗಳನ್ನು ಹಾಗೂ ಸರ್ಕಾರಿ ವಕೀಲ ಸತೀಶ್ ಕುಮಾರ್ ಕೆ ಎಸ್ ಅವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ , ಮಂಜುನಾಥ ಜಿ ರವರು ಶ್ಲಾಘೀಸಿದ್ದಾರೆ.