ದಾವಣಗೆರೆ (Davanagere) : ಒಳಮೀಸಲಾತಿ ನೀಡಲು ಸುರ್ಪ್ರೀಂ ಆದೇಶ ನೀಡಿದರು ಸಹ ರಾಜ್ಯ ಸರಕಾರ ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚನೆ ಮಾಡಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುವುದು ದಲಿತರ ಕಣ್ಣು ಒರೆಸುವ ತಂತ್ರ ಹಾಗೂ ಮಾದಿಗ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, ಈ ಹಿಂದಿನ ಸರ್ಕಾರಗಳು ಹೈ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎ. ಜೆ ಸದಾಶಿವ ಆಯೋಗ, ನಾಗಮೋಹನ್ ದಾಸ್ ಹಾಗೂ ಜೆ. ಸಿ ಮಧುಸ್ವಾಮಿ ವರದಿ ಈ ಮೂರು ವರದಿ ಇರಿಸಿಕೊಂಡು ಕೂಡಲೇ ಜಾರಿ ಮಾಡಬೇಕು ಹಾಗೂ ಈ ಹಿಂದೆ ಜಾರಿಯಾದ ಹುದ್ದೆಯ ಪ್ರಕ್ರಿಯೆಯನ್ನು ತಕ್ಷಣವೇ ರದ್ದು ಮಾಡಿ ಒಳಮೀಸಲಾಯಿತಿ ಜಾರಿಗೆ ತಂದು ನಂತರದಲ್ಲಿ ಹುದ್ದೆಗಳನ್ನು ನೀಡಬೇಕು., ವಿಳಂಬ ಮಾಡಿ ಅನ್ಯಾಯ ಮಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
READ ALSO : Davangere | ಕನ್ನಡ ನಾಡು ಕಲೆ ಸಾಹಿತ್ಯ ಸಂಸ್ಕೃತಿಗಳ ತವರೂರು : ಬಿ.ವಾಮದೇವಪ್ಪ ಬಣ್ಣನೆ