ದಾವಣಗೆರೆ ನ.28 : ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮ ದಾವಣಗೆರೆ ಇಲ್ಲಿಗೆ ನಾಮನಿರ್ದೇಶಕ ಸದಸ್ಯರುಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ದಾವಣಗೆರೆ ಇದ್ದ ಜಿಲ್ಲಾ ಮಟ್ಟದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ಅನುಷ್ಠಾನ ಸಮಿತಿಗೆ 3 ಜನರನ್ನು ನಾಮನಿರ್ದೇಶನ ಮಾಡಲು ಮೇದಾ, ಮೇದಾರಿ. ಗೌರಿಗೆ, ಬುರುಡ, ಮೇದಾರ ಬುಡಕಟ್ಟು ಸಮುದಾಯದ ಬಗ್ಗೆ ಮಾಹಿತಿ ಹೊಂದಿರುವ ಹಾಗೂ ಸೇವೆ ಮಾಡುವ ಸೇವಾ ಮನೋಭಾವ ಹೊಂದಿರುವ ಜನರನ್ನು ಆಯ್ಕೆ ಮಾಡಲಾಗುವುದು.
Read also : ಸಹಾಯ ಧನ ಯೋಜನೆಗಳಿಗೆ ಅರ್ಜಿ ಆಹ್ವಾನ : ಅವಧಿ ವಿಸ್ತರಣೆ
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, 2ನೇ ಮಹಡಿ ಕೊಠಡಿ ಸಂಖ್ಯೆ.45, ಜಿಲ್ಲಾಡಳಿತ ಭವನ ದಾವಣಗೆರೆ ಇಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 3 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
