ದಾವಣಗೆರೆ: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ದಾವಣಗೆರೆಯಲ್ಲಿರುವ ಮಹಾವೀರ ಗೋಶಾಲೆಯಲ್ಲಿ ಈಶ್ವರಮ್ಮ ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯ ವತಿಯಿಂದ ಶುಕ್ರವಾರ ಗೊವುಗಳಿಗೆ ಹುಲ್ಲು ಮತ್ತು ಪಶು ಆಹಾರ ವಿತರಣೆ ಸೇವಾ ಕಾರ್ಯಕ್ರಮ ನಡೆಯಿತು.
ಶಾಲೆಯ ಸುಮಾರು 100 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡು, ಅಲ್ಲಿರುವ ಸುಮಾರು 250 ವಿವಿಧ ತಳಿಯ ಗೊವುಗಳಿಗೆ ಹುಲ್ಲು, ಮತ್ತು ಆಹಾರ ಪದಾರ್ಥಗಳನ್ನು ನೀಡಿ, ಸೇವಾರ್ಥಿಗಳಿಂದ ಸಂಗ್ರಹವಾದ 9000 ರೂ. ಗೋಸೇವೆಗೆ ಉಪಯೋಗಿಸಲು ಧನ ಸಹಾಯ ಮಾಡಲಾಯಿತು.
ಈ ಕಾರ್ಯಕ್ರಮವು ಭಜನಿಯಿಂದ ಪ್ರಾರಂಭವಾಗಿ ಗೋಶಾಲೆಯ ಸುಮಾರು 30 ಕಾರ್ಮಿಕರಿಗೆ ಗೋ ಸಂರಕ್ಷಣೆಗಾಗಿ ಅವರ ಸೇವೆಯನ್ನು ಸ್ಮರಿಸಿ, ಪ್ರಸಾದವನ್ನು ವಿತರಿಸಲಾಯಿತು. ಹಾಗೂ ಎಲ್ಲಾ ಮಕ್ಕಳು ಗೋವುಗಳಿಗೆ ಹುಲ್ಲಿ ತಿನಿಸಿ, ಹಸಿವನ್ನು ನೀಗಿಸಿದ ಸಂತೃಪ್ತಿಯನ್ನು ವ್ಯಕ್ತಪಡಿಸಿ, ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ್, ಪ್ರಾಂಶುಪಾಲರಾದ ಕೆ.ಎಸ್.ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ನೇತೃತ್ವದಲ್ಲಿ ಶಾಲಾ ಶಿಕ್ಷಕಿಯರಾದ ರಂಜನಿ, ರಾಜೇಶ್ವರಿ, ವಾಣಿಶ್ರೀ, ನಾಗರಾಜ ಉತ್ತಂಗಿ. ನಿವೇದಿತ ಕೆ.ಎಂ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
