Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬೆಳೆ ಪರಿಹಾರ, ವಿಮಾ ಪರಿಹಾರ, ಖಾತರಿ ಹಣ ಸಾಲಕ್ಕೆ ಮುರಿದುಕೊಳ್ಳಬಾರದು : ಡಿಸಿ
ತಾಜಾ ಸುದ್ದಿ

ಬೆಳೆ ಪರಿಹಾರ, ವಿಮಾ ಪರಿಹಾರ, ಖಾತರಿ ಹಣ ಸಾಲಕ್ಕೆ ಮುರಿದುಕೊಳ್ಳಬಾರದು : ಡಿಸಿ

Dinamaana Kannada News
Last updated: May 14, 2024 4:16 pm
Dinamaana Kannada News
Share
Davangere DC
ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ಸಭೆ
SHARE

ದಾವಣಗೆರೆ,ಮೇ.14 :   ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69575 ರೈತರಿಗೆ ರೂ.44.35 ಕೋಟಿ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದು ದಾಖಲಾತಿ ಹೊಂದಾಣಿಕೆಯಾಗದ 11597 ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಬ್ಯಾಂಕ್ ಖಾತೆಯ ದಾಖಲಾತಿಗಳನ್ನು ಸರಿಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲ ಕಂತಿನಲ್ಲಿ ತಲಾ 2 ಸಾವಿರದಂತೆ 82928 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 69575 ರೈತರಿಗೆ ಒಟ್ಟು ರೂ.60.23 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11597 ರೈತರಿಗೆ ಇನ್‍ಫುಟ್ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದ್ದು ಇವರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲು ಸಾಧ್ಯವಾಗಿರುವುದಿಲ್ಲ. ಇದರಲ್ಲಿ 5575 ರೈತರ ಖಾತೆಗಳಿಗೆ ಆಧಾರ್ ಜೋಡಣೆಯಾಗಿರುವುದಿಲ್ಲ. ಐಎಫ್‍ಎಸ್‍ಸಿ ಕೋಡ್ ತಪ್ಪಾಗಿರುವ 3696, ಫ್ರೋಟ್ಸ್ ಮತ್ತು ಆಧಾರ್‍ಗೆ ಮಿಸ್ ಮ್ಯಾಚ್ ಆಗಿರುವ 1684, ಆಧಾರ್ ಜೋಡಣೆಯಾಗದ 244 ಸೇರಿದಂತೆ ವಿಫಲ ಪಾವತಿ ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ ಎಂದರು.

ಎಲ್ಲಾ ತಾಲ್ಲೂಕುಗಳಲ್ಲಿ ಪರಿಹಾರದ ಬಗ್ಗೆ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದ್ದ ಇಲ್ಲಿಯವರೆಗೆ 1374 ಕರೆಗಳನ್ನು ಸ್ವೀಕರಿಸಲಾಗಿದೆ. ಬ್ಯಾಂಕ್‍ಗಳಲ್ಲಿ ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡುವ ಮೂಲಕ ಆಧಾರ್ ಸೀಡಿಂಗ್ ಮಾಡುವುದು ಮತ್ತು ಆಧಾರ್‍ನಂತೆ ಬ್ಯಾಂಕ್ ಖಾತೆಯನ್ನು ತಿದ್ದುಪಡಿ ಮಾಡುವ ಮೂಲಕ ಆದಷ್ಟು ಬೇಗ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಎಲ್ಲಾ ಬ್ಯಾಂಕ್‍ಗಳಿಂದಾಗಬೇಕಾಗಿದೆ ಎಂದರು.

ಸಾಲಕ್ಕೆ ಪರಿಹಾರ ಜಮಾ ಮಾಡುವಂತಿಲ್ಲ; ರೈತರು ಬೆಳೆನಷ್ಟ ಅನುಭವಿಸಿದ್ದು ಇವರಿಗೆ ಇನ್‍ಫುಟ್ ಸಬ್ಸಿಡಿ, ಬೆಳೆ ವಿಮಾ ಪರಿಹಾರ ಹಾಗೂ ಉದ್ಯೋಗ ಖಾತರಿಯಡಿ ಕೂಲಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದ್ದು ಇದನ್ನು ರೈತರು ಪಡೆದ ಸಾಲಕ್ಕೆ ತೀರುವಳಿ ಮಾಡಬಾರದು. ರೈತರು ಇವರಾರು ಬಿಎಂಡಬ್ಲಿಯೋ ಕಾರ್ ಇಟ್ಟುಕೊಂಡಿಲ್ಲ. ಅವರಿಗೆ ಸಿಗುವ ಹತ್ತಾರು ಸಾವಿರದಲ್ಲಿ ಬೀಜ, ಗೊಬ್ಬರಕ್ಕೆ ಉಪಯೋಗ ಮಾಡಿಕೊಳ್ಳುವರು. ಆದ್ದರಿಂದ ಯಾವುದೇ ಬ್ಯಾಂಕ್‍ನವರು ಬೆಳೆ ಪರಿಹಾರ, ಖಾತರಿ ಹಣವನ್ನು ಬಾಕಿ ಸಾಲಕ್ಕೆ ಮುರಿದುಕೊಳ್ಳಬಾರದೆಂದು ತಾಕೀತು ಮಾಡಿ ಅಂತಹ ಬ್ಯಾಂಕ್ ಅಧಿಕಾರಿಗಳ ಮೇಲೆ ಸರ್ಕಾರಕ್ಕ ವರದಿ ಮಾಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ , ವಿಶೇಷಚೇತನರಿಗೆ ಬರುವ ಮಾಸಾಶನದ ಹಣವನ್ನು ಅವರ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಲಾಗುತ್ತಿದೆ ಎಂದು ದೂರುಗಳಿದ್ದು ಸರ್ಕಾರ ಅವರ ಜೀವನ ಮಟ್ಟ ಸುಧಾರಣೆ ಮಾಡಲು ಮಾಸಾಶನ ನೀಡಲಾಗುತ್ತಿದ್ದು ಈ ರೀತಿಯಾಗದಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಲೀಡ್ ಮ್ಯಾನೇಜರ್ ಪ್ರಕಾಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

TAGGED:Bankers meeting.dinamaana.comLatest Kannada Newsಕನ್ನಡ ಸುದ್ದಿದಿನಮಾನ.ಕಾಂಬ್ಯಾಂಕರ್ಸ್ ಸಭೆ .
Share This Article
Twitter Email Copy Link Print
Previous Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-23    ಒಂದಿನಾ…ಮಣ್ಣಾಕ ಹೋಗದು!
Next Article MLA Basavantappa ಗಾಳಿ, ಮಳೆಗೆ ಧರೆಗುರುಳಿದ ಅಡಿಕೆ ಮರಗಳು: ಶಾಸಕ ಕೆ.ಎಸ್.ಬಸವಂತಪ್ಪರಿಂದ ಪರಿಶೀಲನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Suez | ಸುಯೆಜ್‌ ಕಂಪನಿಯಿಂದ ವಿಶ್ವ ಪರಿಸರ ದಿನಾಚರಣೆ

ದಾವಣಗೆರೆ (Davanagere): ‍ನಗರದಲ್ಲಿ ಜಲಸಿರಿ ಯೋಜನೆ ಅನುಷ್ಟಾನದ  ಹೊಣೆ ಹೊತ್ತಿರುವ ಸುಯೆಜ್‌ ಕಂಪನಿಯ ವತಿಯಿಂದ  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ…

By Dinamaana Kannada News

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನೂರಕ್ಕೆ ನೂರರಷ್ಟು ವಿಶ್ವಾಸ : ಸಿದ್ದರಾಮಯ್ಯ

ಚಳ್ಳಕೆರೆ, ಅ. 21: ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದ್ದು, ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು…

By Dinamaana Kannada News

Davangere | ರಾಜ್ಯ ದ ಸರ್ವತೋಮುಖ ಅಭಿವೃದ್ದಿಗೆ ಸರ್ಕಾರ ಬದ್ದ; ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ್

ದಾವಣಗೆರೆ.ನ..1 (Davangere) ಕರ್ನಾಟಕ ರಾಜ್ಯ ವೈವಿಧ್ಯತೆಗಳನ್ನು ಹೊಂದಿರುವ ಹಲವು ಜಗತ್ತುಗಳ ಒಂದು ರಾಜ್ಯ, ಇಲ್ಲಿನ ಸರ್ವ ಜನಾಂಗದ ಅಭಿವೃದ್ದಿಗೆ ಸರ್ಕಾರ…

By Dinamaana Kannada News

You Might Also Like

Crime davanagere
ಅಪರಾಧ ಸುದ್ದಿತಾಜಾ ಸುದ್ದಿ

ಕಳ್ಳತನ ಪ್ರಕರಣ : ಓರ್ವ ಆರೋಪಿ ಹಾಗೂ ಇಬ್ಬರು ಅಪ್ರಾಪ್ತರ ಬಂಧನ

By Dinamaana Kannada News
Farmers' registration process for crop insurance scheme begins
ತಾಜಾ ಸುದ್ದಿ

ಬೆಳೆವಿಮೆ ಯೋಜನೆಗೆ ರೈತರ ನೋಂದಣಿ ಪ್ರಕ್ರಿಯೆ ಆರಂಭ

By Dinamaana Kannada News
Davangere
ತಾಜಾ ಸುದ್ದಿ

Davanagere | ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

By Dinamaana Kannada News
Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?