ದಾವಣಗೆರೆ : ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಂಬAಧ ಎಡಗೈ ಸಮುದಾಯವರು ಜಾತಿ ಮತ್ತು ಉಪ ಜಾತಿ ಕಾಲಂನಲ್ಲಿ “ಮಾದಿಗ” ಎಂದೇ ಬರೆಯಿಸಬೇಕು ಎಂದು ಒಳ ಮೀಸಲಾತಿ ಹೋರಾಟ ಸಮಿತಿಯ ಹೆಗ್ಗೆರೆ ರಂಗಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,“ಒಳಮೀಸಲಾತಿ ಜಾರಿಗಾಗಿ ನ್ಯಾö.ಎಚ್.ಎಸ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಎಡಗೈ ಸಮುದಾಯದವರು ಮಾದಿಗ ಎಂದರೆ ಮನೆ ಬಿಡಸಬಹುದೆಂಬ ಕಾರಣಕ್ಕೆ ಕೆಲವೆಡೆ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದ್ರಿ ಆಂಧ್ರ ಎಂದು ಬರೆಸಿದ್ದರ ಪರಿಣಾಮ ಸುಮಾರು 7 ಲಕ್ಷ ಜನರು ಎಡಗೈ ವ್ಯಾಪ್ತಿಗೆ ಬಂದಿಲ್ಲö. ಹಾಗಾಗಿ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಕ್ಕಾಗಿ ಎಲ್ಲರೂ ಸಮೀಕ್ಷೆಯಲ್ಲಿ ಜಾತಿ ಮತ್ತು ಉಪ ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಯಿಸಬೇಕು” ಎಂದು ಸಲಹೆ ನೀಡಿದರು.
ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ಇವರೆಗೆ ಸಮೀಕ್ಷೆ ನಡೆಸಿರುವ ಎಲ್ಲಾ ಆಯೋಗಗಳು ಕರ್ನಾಟಕದಲ್ಲಿ ಮಾದಿಗರ ಸಂಖ್ಯೆಯೇ ಹೆಚ್ಚಿದೆ ಎಂದು ವರದಿ ನೀಡಿವೆ. ಅದರಂತೆ ನಾಗಮೋಹನ್ ದಾಸ್ ಆಯೋಗವು 37 ಲಕ್ಷ ಜನ ಮಾದಿಗರಿದ್ದಾರೆಂದು ವರದಿ ನೀಡಿದ್ದರ ಪರಿಣಾಮ ರಾಜ್ಯ ಸರಕಾರ ಎಡಗೈ ಸಮುದಾಯ ಸಂಬAಧಿತ ಜಾತಿಗಳಿಗೆ ಶೇ.6 ರಷ್ಟು ಒಳಮೀಸಲಾತಿ ಹಂಚಿಕೆ ಮಾಡಿದೆ. ಈ ಮೀಸಲಾತಿ ಪ್ರಮಾಣ ಹೊಸ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಮುಂದುವರೆಯಬೇಕಾದರೆ ಯಾವುದೇ ಸಂಕೋಚ ಇಲ್ಲದೇ ಮಾದಿಗ ಎಂದು ಬರೆಯಿಸಬೇಕು. ಇಲ್ಲದಿದ್ದರೆ, ಸರಕಾರದ ಸೌಲಭ್ಯ ಕಡಿತಗೊಳ್ಳುವ ಅಪಾಯವಿದೆ” ಎಂದು ಸೂಚ್ಯವಾಗಿ ಎಚ್ಚರಿಸಿದರು.
Read also : ಸಮೀಕ್ಷೆಯಿಂದ ಯಾರು ಹೊರಗೆ ಉಳಿಯದಂತೆ ನೋಡಿಕೊಳ್ಳಿ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಗ್ರಹ
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕೆ.ರವಿನಾರಾಯಣ, ಚಿದಾನಂದ್, ಲಕ್ಷಣ್ ಹರಿಜನ್, ಎಸ್.ಜಯಪ್ಪö, ಎಲ್.ಜಯಪ್ಪö, ನಿಂಗರಾಜ್ ಶಿರಮಗೊಂಡನಹಳ್ಳಿö ಇದ್ದರು.
