ದಾವಣಗೆರೆ : ದಸರಾ ಹಬ್ಬದ ಸಮಯದಲ್ಲಿ ಪ್ಲೆಕ್ಸ್ ಹರಿದು ವಿರೂಪಗೊಳಿಸಿದ 05 ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ಮುಕ್ತಿಯಾರ್, ಆಬೀದ್, ಆತಿಕ್,ಸಾಧಿಕ್,ಅಮಾನುಲ್ಲಾ ಬಂಧಿತ ಆರೋಪಿಗಳು.
ಅಜಾದನಗರ ಠಾಣಾ ವ್ಯಾಪ್ತಿಯಲ್ಲಿ ಬೇತೂರು ರಸ್ತೆಯ ಇಮಾಂ ನಗರದ 5ನೇ ಕ್ರಾಸ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿದ ಶ್ರೀರಾಮನ ಭಾವಚಿತ್ರ ಹಾಗೂ ಮುದ್ದಬೋವಿ ಕಾಲೋನಿಯ 2 ನೇ ಕ್ರಾಸ್ ನಲ್ಲಿ ಅಳವಡಿಸಿದ್ದ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದು ಇದರಿಂದ ಒಂದು ಕೋಮಿನ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶದಿಂದ ಹಾಗೂ ಸಮಾಜದ ಶಾಂತಿಯನ್ನು ಕದಡುವ ಕೃತ್ಯ ಎಸಗಿದ್ದಾರೆ ಎನ್ನುವ ದೂರಿನ ಹಿನ್ನಲೆಯಲ್ಲಿ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಪತ್ತೆ ಮಾಡಲು ಎಸ್ಪಿ ಉಮಾಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗ್ಡೆ ಮಾರ್ಗದರ್ಶದನದಲ್ಲಿ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಬಿ., ನೇತೃತ್ವದಲ್ಲಿ ಅಜಾದನಗರ ಪಿಎಸ್‌ಐ ಲಕ್ಷ್ಮಣ ನಾಯ್ಕ್ ಉಸ್ತುವಾರಿಯಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
Read also : ದಾವಣಗೆರೆ|ಏಕ ಬಳಕೆ ಪ್ಲಾಸ್ಟಿಕ್ ನಿಷೇಧ:ಡಿಸಿ
ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸಿಪಿಐ ಲಕ್ಷ್ಮಣ ನಾಯ್ಕ್, ಸಿಬ್ಬಂದಿಗಳಾದ ಎ ಎಸ್ ಐ ಚಂದ್ರಪ್ಪ, ಎ ಎಸ್ ಐ ಈರಣ್ಣ ಸ್ವಾಮಿ, ಮಂಜುನಾಥ ನಾಯ್ಕ್, ಕೃಷ್ಣಪ್ಪ ನಂದ್ಯಾಲ್, ವೆಂಕಟೇಶ್, ಜಿ.ಆರ್ ಗುಗ್ಗರಿ ಲೋಕೇಶ್, ಖಾಜಾ ಹುಸೇನ್ ಅತ್ತಾರ್, ಸಲಹುದ್ದಿನ್ , ಮಾಲತೇಶ ಕೆಳಗಿನಮನಿ, ಪರಶುರಾಮ್ ಅವರನ್ನು ಎಸ್ಪಿ ಉಮಾ ಪ್ರಶಾಂತ ಪ್ರಶಂಸಿಸಿದ್ದಾರೆ.