ದಾವಣಗೆರೆ/ಲಕ್ಷ್ಮೀಶ್ವರ ಜ. 19 (Davanagere) ; ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಗದಗ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಅಮೃತ ಮಹೋತ್ಸವ ಹಾಗೂ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಮಕ್ಕಳಿಗೆ ಮೌಲ್ಯಗಳ ಬಗ್ಗೆ ತಿಳಿಸಬೇಕು.ಮೊದಲು ಅವಿಭಕ್ತ ಕುಟುಂಬಗಳಿಂದ ಮಕ್ಕಳು ಚಿಕ್ಕಂದಿನಿಂದಲೇ ಮೌಲ್ಯಗಳನ್ನು ತಿಳಿದುಕೊಳ್ಳುತ್ತಿದ್ದರು ಆದರಿಂದು ವಿಭಕ್ತ ಕುಟುಂಬಗಳೇ ಹೆಚ್ಚಾಗಿದ್ದು ಜೀವನದ ಮೌಲ್ಯಗಳು ಮರೆಯಾಗುತ್ತಿವೆ ಎಂದರು.
ಮಹಿಳೆಯರ ಶಿಕ್ಷಣದ ಬಗ್ಗೆ ಸ್ವಾತಂತ್ರ್ಯ ಪೂರ್ವದಲ್ಲೇ ಸಾವಿತ್ರಿಬಾಯಿಪುಲೆ ಅವರು ದೊಡ್ಡ ಚಳುವಳಿಯನ್ನೇ ಮಾಡಿದ್ದರು ಅದೇ ರೀತಿ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದವರು ಮಹಿಳೆಯರೇ ಸೇರಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದು ಹಾಗೂ ಶಿಕ್ಷಣ ದಾಸೋಹವನ್ನು ಮೂರು ತಲೆಮಾರಿನಿಂದ ಮಾಡುತ್ತಿರುವುದು ಶ್ಲಾಘನೀಯ ಎಂದರು.ಪ್ರಸ್ತುತ ಸಮಯದಲ್ಲಿ ಯುವಸಮೂಹಕ್ಕೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಸಂವಿಧಾನ ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ.ಜವಾಬ್ದಾರಿ ನೀಡಿದೆ.ನಮ್ಮ ದೇಶ ಹಾಗೂ ಸಮಾಜಕ್ಕೆ ನಮ್ಮ ಜವಾಬ್ದಾರಿ ಮುಖ್ಯ ಎನ್ನುವುದನ್ನು ತಿಳಿಸಿದೆ.
ಬೆಳೆಯವ ಸಿರಿ ಮೊಳಕೆಯಲ್ಲಿ ಎಂಬಂದತೆ ಮಕ್ಕಳಲ್ಲಿ ಶಾಲಾ ಹಂತದಲ್ಲೇ ಸಂವಿಧಾನ ಹಾಗೂ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಇದರಿಂದ ದೇಶ ಕಟ್ಟುವ ಕೆಲಸ ಯುವಜನರು ಮಾಡಬಹುದು.ಸಂವಿಧಾನದ ಅರಿವು ಮೂಡಿಸುವ ಕೆವೈಸಿ ಅಭಿಯಾನವನ್ನು ದಾವಣಗೆರೆ ಜಿಲ್ಲೆಯಲ್ಲಿ ಮುಂಬರುವ ದಿನದಲ್ಲಿ ಕೈಗೊಳ್ಳಲಿದ್ದೇವೆ. ನಮ್ಮಸಂವಿಧಾನದಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಲಾಗಿದೆ ಅದರಲ್ಲೂ ಮಹಿಳೆಯರಿಗೆ ಮತಚಲಾಯಿಸುವ ಹಕ್ಕು ನೀಡಿದೆ. ಮಹಿಳೆಯರ ಪರವಾಗಿ ದಿಟ್ಟವಾಗಿ ಕೆಲಸ ಮಾಡಲು ನನ್ನ ದಾವಣಗೆರೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಾರೆ.ದಾವಣಗೆರೆಯ ಪ್ರಥಮ ಮಹಿಳಾ ಸಂಸದೆಯಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಹೆಮ್ಮೆಯಾಗುತ್ತದೆ ಎಂದರು.
ಜನಾಶೀರ್ವಾದ ದಿಂದ ರಾಜಕಾರಣಕ್ಕೆ ಬಂದಿದ್ದೇನೆ ಹಾಗೂ ಜನರ ಸೇವೆಗೆ ಸದಾ ಸಿದ್ದ.ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರು ವಿದ್ಯಾರ್ಥಿಗಳಿಗೆ ನೆರವು ನೀಡುವ ಉದ್ದೇಶದಿಂದ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಈ ಮೂಲಕ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.ಇದರೊಂದಿಗೆ ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಆರೋಗ್ಯ ದಾಸೋಹ ಕೂಡ ಮಾಡುತ್ತಿದ್ದೇವೆ.ಬಡ ಜನರಿಗೆ ಉಚಿತ ಡಯಾಲಿಸಿಸ್ ಮಾಡಲಾಗುತ್ತಿದೆ ಇಲ್ಲಿಯವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಉಚಿತ ಡಯಾಲಿಸಿಸ್ ಮಾಡಲಾಗಿದೆ.ಮಹಿಳೆಯರು ಅದರಲ್ಲೂ ನಲವತ್ತು ವರ್ಷ ದಾಟಿದವರು ಸ್ತನ ಹಾಗೂ ಗರ್ಭ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ ಆದ್ದರಿಂದ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಾನಿಧ್ಯ ವಹಿಸಿದ್ದರು.ಶ್ರೀ ತಾಯಿ ಪಾ.ಮ.ಬಳಗದ ಅಧ್ಯಕ್ಷೆ ಸುವರ್ಣಬಾಯಿ ಬಿ. ಬಹದ್ದೂರದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ.ಮಹಾAತಶೆಟ್ಟರ, ಜಿ.ಎಸ್.ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷರಾದ ಯಲ್ಲಮ್ಮ ದುರಗಣ್ಣವರ ಭಾಗವಹಿಸಿದ್ದರು.