ದಾವಣಗೆರೆ (DAVANAGERE)- ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿಗಳ ಹಕ್ಕು ವರ್ಗಾವಣೆಗೆ ಇದೇ ಡಿಸೆಂಬರ್ 18 ರ ಸರ್ಕಾರದ ಆದೇಶದಂತೆ ನಿಗಧಿಪಡಿಸಲಾಗಿದ್ದ 45 ದಿನಗಳ ಅವಧಿಯನ್ನು 30 ದಿನಗಳಿಗೆ ಕಡಿತಗೊಳಿಸಿ ಕಾವೇರಿ-2.0 ತಂತ್ರಾಂಶದೊಂದಿಗೆ ಇ- ಆಸ್ತಿ ತಂತ್ರಾಂಶವನ್ನು ಸಂಯೋಜನೆಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತರಾದ ರೇಣುಕ ತಿಳಿಸಿದ್ದಾರೆ.
ಸಂಯೋಜನೆಗೋಳಿಸಿದ ದಿನಾಂಕದಿಂದ ನೋಂದಾವಣೆಯಾಗಿರುವ ದಸ್ತಾವೇಜುಗಳಿಗೆ ಹಾಗೂ ಹಕ್ಕು ವರ್ಗಾವಣೆಗಾಗಿ ಮಹಾನಗರಪಾಲಿಕೆ ವಲಯ ಕಛೇರಿಯಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಕಾವೇರಿ-2.0 ತಂತ್ರಾಂಶದಿಂದ ಸ್ವೀಕೃತವಾಗುವ ವಹಿವಾಟನ ದಾಖಲೆಗಳ ಆಧಾರದ ಮೇಲೆ ಹಕ್ಕು ವರ್ಗಾವಣೆಯನ್ನು ಸಾರ್ವಜನಿಕ ತಿಳುವಳಿಕೆ ಅವಧಿಯ ನಂತರ ಆಕ್ಷೇಪಣೆ ಇಲ್ಲದಿದ್ದಲ್ಲಿ ಅಥವಾ ಇದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಹಕ್ಕು ವರ್ಗಾವಣೆಗೆ ಕ್ರಮ ವಹಿಸಲಾಗುವುದು.
ಅರ್ಜಿ ಅವಧಿ ಮುಗಿದ ನಂತರ ಸ್ವತ್ತಿನ ಮಾಲೀಕರು www.eaasthi.karnataka.gov.in ವೆಬ್‌ಸೈಟ್‌ನಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಂಡು, ನಿಗಧಿತ ಶುಲ್ಕವನ್ನು ಮಹಾನಗರಪಾಲಿಕೆಗೆ ಪಾವತಿಸಿ, ಇ- ಆಸ್ತಿ ಹಕ್ಕು ಬದಲಾವಣೆ ಪತ್ರ ನಮೂನೆ-2 ಅನ್ನು ಪಡೆಯ ಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ.
Read also : ಗ್ರಾಪಂ ಅಧ್ಯಕ್ಷರಾಗಿ ಲಕ್ಷ್ಮೀ ಮಂಜಪ್ಪ ಎ.ಕೆ ಅವಿರೋಧವಾಗಿ ಆಯ್ಕೆ