ದಾವಣಗೆರೆ: ಈಶ್ವರಮ್ಮ ಶಾಲಾ ವಿದ್ಯಾರ್ಥಿಗಳು ನಿರಾಶ್ರಿತ ಹೆಣ್ಣುಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಜ್ಞಾನದ ಬೆಳಕನ್ನು ಚಿಲ್ಲುವಂತ ಕಾರ್ಯದಲ್ಲಿ ಭಾಗಿಯಾಗುವಂತ ಒಂದು ಪುಣ್ಯದ ಕೆಲಸ ಎಂದು ಉಪಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಶ್ಲಾಘಿಸಿದರು.
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ ನಗರದ ಈಶ್ವಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಮಾಜದ ಮುಖ್ಯ ವಾಹಿನಿಯಿಂದ ನಿರಾಶ್ರಿತರಾದ ಪ್ರೇಮಾಲಯ – ನಿರಾಶ್ರಿತ ಹೆಣ್ಣು ಮಕ್ಕಳು, ಆಶ್ರಯ ಹಿರಿಯ ವನಿತೆಯರ ಆನಂದ ಧಾಮ ಮತ್ತು ಬುದ್ದಿ ಮಾಂಧ್ಯ ಮಕ್ಕಳ ಸೇವಾ ನಿಕೇತನ ಶಾಲೆಯಲ್ಲಿ ಅನೇಕ ಸೇವಾ ಕಾರ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣೆಂದು ಕಲಿತರೆ ಶಾಲೆಯನ್ನು ತೆರೆದಂತೆ ಎಂಬ ನಾನ್ನುಡಿಯಂತೆ ಹೆಣ್ಣುಮಕ್ಕಳ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಸಾಧನೆ ಮಾಡುತ್ತಿರುವುದು ಭಾರತ ದೇಶದ ಪ್ರಗತಿ ತೋರಿಸುತ್ತದೆ ಎಂದು ಹೇಳಿದರು.
ಸಮಾಜದಿಂದ ನಿರ್ಲಕ್ಷಿತರಾದ ಪ್ರೇಮಾಲಯದ ನಿರಾಶ್ರಿತ ಹೆಣ್ಣುಮಕ್ಕಳಿಗೆ ಕಲಿಕೆಗೆ ಅನುಕೂಲವಾಗುವಂತೆ ಕಲಿಕೋಪಕರಣಗಳನ್ನು ವಿತರಿಸಲಾಯಿತು.
ಹಿರಿಯ ವನಿತೆಯರಧಾಮ:
ಆಶ್ರಯ ಹಿರಿಯ ವನಿತೆಯರ ಆನಂದ ಧಾಮದಲ್ಲಿ ವಿದ್ಯಾರ್ಥಿಗಳು ಆಶ್ರಮದ ವೃದ್ಧರಿಗೆ ಆಹಾರ ಪದಾರ್ಥಗಳು ಮತ್ತು ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿ ಹಿರಿಯರ ಆಶೀರ್ವಾವಾದ ಪಡೆದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಕೆ.ಎಸ್. ಪ್ರಭುಕುಮಾರ್ ಮಾತನಾಡಿ , ಆಶ್ರಯ ವೃದ್ದಾಶ್ರಮದಲ್ಲಿರುವ ಹಿರಿಯ ವನಿತೆಯರು ತಮ್ಮ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆದಿದ್ದರೂ, ತಮ್ಮ ಕುಟುಂಬದವರಿಂದ ನಿರ್ಲಕ್ಷಿತರಾಗಿ ವೃದ್ಧಾಶ್ರಮದಲ್ಲಿ ನೆಲೆಗೊಂಡು ಉತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಅನುಭವಗಳನ್ನು ತಿಳಿದು ಇಂತಹ ಸ್ಥಿತಿಗತಿಗಳನ್ನು ತಮ್ಮ ಪೋಷಕರಿಗೆ ಯಾವುದೇ ನೋವು ತರದ ಕೆಲಸ ಮಾಡದೇ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕೆಂದರು.
ಈ ವೇಳೆ ಸೇವಾನಿಕೇತನ ಬುದ್ದಿಮಾಂದ್ಯರಿಗೆ ಅಗತ್ಯವಿರುವ ಕಲಿಕಾ ಮತ್ತು ಆಟೋಪಕರಣಗಳನ್ನು ವಿತರಿಸಿದರು. ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಅಗತ್ಯವಿರುವವರಿಗೆ ಸಹಾಯ ಮಾಡುವ ಸಂಸ್ಕಾರವನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ಶಾಲಾ ಕಾರ್ಯದರ್ಶಿ ಎ.ಆರ್.ಉಷಾರಂಗನಾಥ ಸಲಹೆ ನೀಡಿದರು.
ಈ ಸೇವಾ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ/ಶಿಕ್ಷಿಯರು ಹಾಗೂ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲದ ವಿದ್ಯಾರ್ಥಿಗಳು, ಎಲ್ಲಾ ತರಗತಿಗಳು ಪ್ರತಿನಿಧಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
