ಹರಿಹರ (Harihara) : ಪ.ಜಾತಿ ಮತ್ತು ಪ.ಪಂಗಡದ ಹರಿಹರ ತಾಲ್ಲೂಕು ಮಟ್ಟದ ಕುಂದುಕೊರತೆ ಸಭೆ ನಡೆಸಲು ಕರ್ನಾಟಕದಲಿತ ಸಂಘರ್ಷ ಸಮಿತಿಯ ಹರಿಹರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಈ ಹಿಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಗಳನ್ನು ನಡೆಸಲಾಗುತ್ತಿತ್ತು. ಆ ಸಭೆಗಳಲ್ಲಿ ಈ ತಳ ಸಮುದಾಯದ ಮುಖಂಡರು, ಜನ ಸಾಮಾನ್ಯರು ಈ ಸಭೆಗಳಲ್ಲಿ ಭಾಗವಹಿಸಿ ತಾವು ನಿತ್ಯ ಬದುಕಿನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಾಲ್ಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಮುಂದೆ ಪ್ರಸ್ತಾಪಿಸಿ ಪರಿಹಾರವನ್ನು ಪಡೆಯುತ್ತಿದ್ದರು.
ಈ ಹಿಂದೆ 09-01-2022 ರಂದು ಇಂತಹ ಸಭೆ ನಡೆಸಿದ್ದು ಬಿಟ್ಟರೆ ಈವರೆಗೆ ಸಭೆ ಕರೆದಿರುವುದಿಲ್ಲ. ಕೋವಿಡ್ ಹಾಗೂ ಚುನಾವಣೆಗಳ ಕಾರಣವನ್ನು ಮುಂದಿಟ್ಟು ಕಳೆದ ಮೂರು ವರ್ಷ ನಾಲ್ಕು ತಿಂಗಳಿAದ ಸಭೆಗಳನ್ನು ನಡೆಸಿರುವುದಿಲ್ಲ. ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ವಿವಿಧ ಇಲಾಖಾಧಿಕಾರಿಗಳು ಎಸ್ಸಿ, ಎಸ್ಟಿ ಜನ ಸಮುದಾಯದವರ ಹಕ್ಕುಗಳ ಸಂರಕ್ಷಣೆ ಬಗ್ಗೆ ಪುಂಖಾನು, ಪುಂಖವಾಗಿ ಆಡುವ ಮಾತು ಕೇವಲ ಮೊಸಳೆ ಕಣ್ಣೀರು ಎಂಬುದು ಇಲ್ಲಿ ಬಯಲಾಗಿದೆ.
ಇಂತಹ ಸಭೆಗಳು ತಾಲ್ಲೂಕು ಮಟ್ಟದ ಜೊತೆಗೆ ಹೋಬಳಿ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ನಿಯಮತವಾಗಿ ನಡೆಸಬೇಕು. ಒಂದೊAದು ಪ್ರದೇಶಕ್ಕೆ ತಳ ಸಮುದಾಯದವರ ಸಮಸ್ಯೆಗಳು ವಿಭಿನ್ನವಾಗಿರುವ ಕಾರಣ ಈ ಸಭೆಗಳು ಗ್ರಾಮೀಣ ಭಾಗದಲ್ಲೂ ಆಯೋಜಿಸುವ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
Read also : Davanagere | ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹಾಗೂ ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸಿ ಆದಷ್ಟು ಬೇಗನೆ ಈ ಸಭೆ ಆಯೋಜಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.