ದಾವಣಗೆರೆ ನ.26 (Davanagere)- ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒನ್ ಸ್ಟಾಪ್ ಸೆಂಟರ್ ಸಖಿ ಕೇಂದ್ರಕ್ಕೆ ಗೌರವಧನದ ಆಧಾರದ ಮೇಲೆ ಪ್ಯಾರಾಲೀಗಲ್ ಪರ್ಸನಲ್, ನ್ಯಾಯವಾದಿ ಹುದ್ದೆಗೆ ಸಿಬ್ಬಂದಿಯನ್ನು ನೇರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ಯಾರಾಲೀಗಲ್ ಪರ್ಸನಲ್, ನ್ಯಾಯಾವಾದಿ ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಕಾನೂನು ಪದವಿ, ವಕೀಲ ವೃತ್ತಿಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಬೇಕು. ಸಂತ್ರಸ್ತ ಮಹಿಳೆ ಮತ್ತು ಮಕ್ಕಳ ಪ್ರಕರಣಗಳನ್ನು ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು.
ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿ.9 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 7ನೇ ಮುಖ್ಯರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್ ಕುವೆಂಪು ನಗರ, ದಾವಣಗೆರೆ-577004 ದೂ.ಸಂ:08192-295738, 9353428455 ನ್ನು ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
Read also : Davanagere | ಬ್ಲಾಕ್ ಕೋ ಅಡಿನೇಟರ್ ಹುದ್ದೆಗೆ ಅರ್ಜಿ ಆಹ್ವಾನ