ದಾವಣಗೆರೆ (Davanagere): ಜಮೀನಿನ ಪಹಣಿಗಳು ಜಂಟಿಯಾಗಿರುವುದರಿಂದ ಸರ್ಕಾರಿ ಸೌಲಭ್ಯ, ಸಾಲ ಸೌಲಭ್ಯ ಪಡೆಯಲು ಸಮಸ್ಯೆಯಾಗಿದ್ದು, ಕೂಡಲೇ ಪೋಡಿ ಮಾಡಿ, ಅವರ ಹೆಸರಿನಲ್ಲಿ ಪಹಣಿ ಮಾಡಿಸುವ ಕುರಿತು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು.
ತಾಲೂಕಿನ ಹುಲಿಕಟ್ಟೆ ಗ್ರಾಮದ ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಭೇಟಿ ನೀಡಿದ ಶಾಸಕರು, ಹುಲಿಕಟ್ಟೆ ಗ್ರಾಮದ ಸರ್ವೇ ನಂ.57ರಲ್ಲಿ 100ಕ್ಕೂ ಹೆಚ್ಚು ರೈತರ ಪಹಣಿಗಳು ಜಂಟಿಯಾಗಿರುವುದರಿಂದ ಸರ್ಕಾರಿ ಸೌಲಭ್ಯ, ಸಾಲ ಸೌಲಭ್ಯ ಪಡೆಯಲು ಸಮಸ್ಯೆ ಆಗಿದೆ. ಇದರಿಂದ ರೈತರು ಪರಿತಪಿಸುತ್ತಿದ್ದಾರೆ. ಕೂಡಲೇ ಪೋಡಿ ಮಾಡಿ ಅವರ ಹೆಸರಿನಲ್ಲಿ ಪಹಣಿ ಬರುವಂತೆ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಜಮೀನಿನ ಓಡಾಡಲು ರಸ್ತೆ ಸಮಸ್ಯೆ ಇದ್ದು, ಇದನ್ನು ಸರಿಪಡಿಸಬೇಕೆಂದು ರೈತರ ಪರವಾಗಿ ಮನವಿ ಮಾಡಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಂಟಿಯಾಗಿರುವ ಪಹಣಿ, ಪೋಡಿ ಮತ್ತು ಜಮೀನಿನ ರಸ್ತೆ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತರು ಶಾಸಕ ಕೆ.ಎಸ್.ಬಸವಂತಪ್ಪ ಮತ್ತು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಹುಲಿಕಟ್ಟೆ ಗ್ರಾಮದ ಚನ್ನಬಸಪ್ಪ, ಪತ್ಯನಾಯ್ಕ್, ರತ್ನಿಬಾಯಿ, ಅರುಣ್‍ನಾಯ್ಕ್, ನಿರ್ಮಲ, ಶಶಿಧರ್ ಇನ್ನಿತರರಿದ್ದರು.
Read also : ಮುಡಾ ಪ್ರಕರಣ | ಸಿ.ಎಂ. ಸಿದ್ದರಾಮಯ್ಯಗೆ ಕ್ಲೀನ್ ಚಿಟ್, ಸತ್ಯಕ್ಕೆ ಜಯ : ಪ್ರವೀಣ್ ಕುಮಾರ್