ದಾವಣಗೆರೆ (Davanagere): ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 31 ಜೋಡಿಗಳು ನಡೆದ ಲೋಕ್ ಆದಾಲತ್‍ನಲ್ಲಿ ರಾಜಿ ಸಂಧಾನದಿಂದಾಗಿ ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೊಮ್ಮೆ ಒಂದಾಗಿ ಸಹಬಾಳ್ವೆ ನಡೆಸಲು ತೆರಳಿದ್ದಾರೆ.
ಹರಿಹರದಲ್ಲಿ ತಾಲೂಕ ನ್ಯಾಯಾಲಯದಲ್ಲಿ 01, ಚನ್ನಗಿರಿ ತಾಲೂಕು ನ್ಯಾಯಾಲಯಗಳಲ್ಲಿ 01, ಜಗಳೂರು ನ್ಯಾಯಾಲಯದಲ್ಲಿ 01 ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ವಿವಾಹ ವಿಚ್ಚೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದರು.
ವಿವಿಧ ನ್ಯಾಯಾಲಯದ ಪ್ರಕರಣ ದಾಖಲಿಸಿದ್ದ 31 ಜೋಡಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾಗಿ ಜೀವನ ನಡೆಸಲು ತಿರ್ಮಾನಿಸಿ ತೆರಳಿದ್ದಾರೆ.
ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಧ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರು ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದದ ಲೋಕ್ ಆದಾಲತ್‍ನಲ್ಲಿ ಒಟ್ಟು 6,492 ಜಾರಿಯಲ್ಲಿರುವ ಪ್ರಕರಣಗಳು ಮುಕ್ತಾಯಗೊಂಡು 14,66,06,186 ಹಣದ ಪರಿಹಾರವಾಗಿದೆ. 2,46,435 ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 65,71,32,727 ಹಣ ಸರಕಾರಿಗ ವಸೂಲಾತಿ ಮತ್ತು ಪರಿಹಾರ ಇತ್ಯಾದಿ ರಾಜೀ ಮೂಲಕ ಪರಿಹಾರವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ,ಮಹಾವೀರ ಕರೆಣ್ಣನವರ್ ತಿಳಿಸಿದ್ದಾರೆ.
51 ಅಪರಾಧಿಕ ಪ್ರಕರಣಗಳು, 187 ಚೆಕ್ ಅಮಾನ್ಯ ಪ್ರಕರಣಗಳು, 22 ಬ್ಯಾಂಕ್ ವಸೂಲಾತಿ ಪ್ರಕರಣಗಳು, 31 ಇತರೆ ಹಣ ವಸೂಲಾತಿ, 64 ಅಪಘಾತ ಪ್ರಕರಣಗಳು, 101 ವಿದ್ಯುತ್ ಕಳ್ಳತನ ಪ್ರಕರಣ, 09 ಅಕ್ರಮ ಮರಳು ಗಣಿಗಾರಿಕೆ ಪ್ರಕರಣಗಳು, 60 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 128 ಜಾರಿ ಅರ್ಜಿಗಳು ಅಲ್ಲದೇ ಹಲವು ಕಾರಣಕ್ಕಾಗಿ ದಾಖಲಿಸಿದ 59 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 33 ರಾಜೀ ಮೂಲಕ ಇತ್ಯರ್ಥಿಗೊಂಡಿವೆ. ಇತರೆ ಪ್ರಕರಣಗಳು ಸೇರಿ ಒಟ್ಟು 6,492 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಿಗೊಂಡಿವೆ.
ಜಿಲ್ಲೆಯಾದ್ಯಂತ ಸುಮಾರ 360 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸರಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನಕ್ಕೆ ಅನುವು ಮಾಡಿಕೊಡಲಾಯಿತು.
ವ್ಯಾಜ್ಯ ಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಸೂಲಾತಿ, ಕಾರ್ಮಿಕ ವ್ಯಾಜ್ಯಗಳು, ನೀರಿನ ಬಾಕಿ ವಸೂಲಾತಿ, ಕಂದಾಯ ಪ್ರಕರಣಗಳು, ಟ್ರಾಫಿಕ್ ಪ್ರಕರಣಗಳು, ಸೇರಿದಂತೆ ಒಟ್ಟು 2,46,435 ಪ್ರಕರಣಗಳು ಇತ್ಯರ್ಥಗೊಂಡು ಎಲ್ಲಾ ಪ್ರಕರಣಗಳಿಂದಾಗಿ 65,71,32,727 ವಸೂಲಾತಿಯಾಗಿದೆ ಎಂದು ತಿಳಿಸಿದ್ದಾರೆ.
Read also : ಒಳ ಮೀಸಲಾತಿ ಜಾರಿಗೆ ಡಿ.16 ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶ