ದಾವಣಗೆರೆ.ಜ.11 (Davanagere); ನಗರದ ಎಸ್ ಎಸ್ ಹೈಟೆಕ್ ಆಸ್ಪತ್ರೆ ಸಮೀಪದ ಭೂಮಿಕ ನಗರದಿಂದ ರಾಮನಗರಕ್ಕೆ ಸಾಗುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆಯಿಂದ ಹಲವಾರು ಅಪಘಾತಗಳು ಹಾಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ನವದೆಹಲಿಯಿಂದ ಆಗಮಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ದೆಹಲಿಯ ಸಂಸತ್ ನಲ್ಲಿ ನಡೆದ ಕಲಾಪದಲ್ಲಿಯೂ ಸಂಸದರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿನೀಡಿ ಪರ್ಯಾಯ ವ್ಯವಸ್ಥೆ ಕುರಿತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.
ಈ ವೇಳೆ ಸಂಸದರು ಅಧಿಕಾರಿಗಳಿಗೆ ಈ ಸೇತುವೆಯು ಕಿರಿದಾಗಿದ್ದು ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಘಟಕಕ್ಕೆ ಹೋಗುವ ಭಾರಿ ವಾಹನಗಳು ಮತ್ತು ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳು ಜೊತೆಯಲ್ಲಿ ಇತರೆ ಭಾರಿ ವಾಹನಗಳು ಸಾಗುತ್ತಿರುತ್ತವೆ. ಸೇತುವೆಯು 2x4x.4.5 ಮೀ. ವಿಸ್ತಾರ ಹೊಂದಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿವೆ ಎಂದು ವಿವರಿಸಿದರು.
Read also : ನಕ್ಸಲಿಂ ನ್ನು ಸಂಪೂರ್ಣ ತೊಡೆದುಹಾಕವುದು ಸರ್ಕಾರದ ಉದ್ದೇಶ : ಸಿದ್ದರಾಮಯ್ಯ