Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್‌ಗಳ ಸ್ಥಾಪನೆ
ತಾಜಾ ಸುದ್ದಿ

ಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್‌ಗಳ ಸ್ಥಾಪನೆ

Dinamaana Kannada News
Last updated: March 18, 2024 4:33 pm
Dinamaana Kannada News
Share
Establishment of 32 check posts in the district : DC
ಜಿಲ್ಲಾಧಿಕಾರಿಗಳಿಂದ ಚೆಕ್‍ಪೋಸ್ಟ್‌ ಗಳಿಗೆ ಭೇಟಿ ಪರಿಶೀಲನೆ
SHARE

ದಾವಣಗೆರೆ, ಮಾ.18:
ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲೆಯ ಗಡಿಭಾಗ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 32 ಕಡೆ ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿ ಮೂರು ಜನ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ದಿನದ 24 ಗಂಟೆಯು ಕಾವಲು ನಡೆಸುವ ಮೂಲಕ ಅಕ್ರಮವಾಗಿ ಸಾಗಣೆ ಮಾಡುವ ವಸ್ತುಗಳು, ಮದ್ಯ, ನಗದು ಮತ್ತು ಇನ್ನಿತರೆ ಬಂಗಾರದ ವಸ್ತುಗಳ ಮೇಲೆ ನಿಗಾ ಇಡುವರು. ಆ ಮಾರ್ಗದಲ್ಲಿ ಹೋಗುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ವಸ್ತುಗಳನ್ನು ಸಾಗಣೆ ಮಾಡಲು ಅಭ್ಯಂತರ ಇರುವುದಿಲ್ಲ, ಆದರೆ ಸಂಬಂಧಿಸಿದ ವಸ್ತುಗಳು, ಹಣ, ಯಾವುದೇ ಇದ್ದಲ್ಲಿ ದಾಖಲೆಗಳು ಅತ್ಯವಶ್ಯಕವಾಗಿದ್ದು ವಾಹನ ಸವಾರರು, ಸಾರ್ವಜನಿಕರು ಚೆಕ್‍ಪೋಸ್ಟ್‌ ಗಳಲ್ಲಿ ಹಾಜರುಪಡಿಸುವ ಮೂಲಕ ಸಿಬ್ಬಂದಿಗಳಿಗೆ ಸಹಕರಿಸಬೇಕು ಎಂದರು.

ಚೆಕ್‍ಪೋಸ್ಟ್‌ಗಳ ವಿವರ

103-ಜಗಳೂರು ವಿಧಾನಸಭಾ ಕ್ಷೇತ್ರ
ಬಿದರಕೆರೆ ಹತ್ತಿರ, ಗಡಿಮಾಕುಂಟೆ, ಅರಸೀಕೆರೆ ಠಾಣೆ ವ್ಯಾಪ್ತಿಯ ಕುರೆಮಾಗನಹಳ್ಳಿ ಹತ್ತಿರ, ಚಳ್ಳಕೆರೆ ರಸ್ತೆ ಮುಸ್ಟೂರು ಹತ್ತಿರ, ಬಿಳಿಚೋಡು ವ್ಯಾಪ್ತಿಯ ಕನಾನಕಟ್ಟೆ ಎನ್.ಹೆಚ್.13 ಹತ್ತಿರ.

105-ಹರಿಹರ ವಿಧಾನಸಭಾ ಕ್ಷೇತ್ರ
ಹರಿಹರ ರಾಘವೇಂದ್ರ ಮಠದ ಹತ್ತಿರ, ಹಲಸಬಾಳು ಕ್ರಾಸ್, ಕುರುಬರಹಳ್ಳಿ ಹತ್ತಿರ, ನಂದಿಗುಡಿಯಲ್ಲಿ ಚೆಕ್ ಪೋಸ್ಟ್‌ ನಿರ್ಮಾಣ ಮಾಡಲಾಗಿದೆ.

106-ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

ಭೂಮಿಕ ನಗರ, ಲೋಕಿಕೆರೆ ಕ್ರಾಸ್, ಕಲ್ಪನಹಳ್ಳಿ ಸರ್ಕಲ್(ಮಾಗಾನಹಳ್ಳಿ), ಎನ್.ಹೆಚ್-4 ಶಾಮನೂರು ಕ್ರಾಸ್, ವಿದ್ಯಾನಗರ ಲಾಸ್ಟ್ ಬಸ್ ಸ್ಟಾಪ್ ಹತ್ತಿರ. 107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಾಡ ಕ್ರಾಸ್, ಬೇತೂರು ರೋಡ್, ಕೊಂಡಜ್ಜಿ ರಸ್ತೆ, ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ ಬಳಿ. 108-ಮಾಯಕೊಂಡ ವಿಧಾನಸಭಾ ಕ್ಷೇತ್ರ: ಹೆಬ್ಬಾಳ್ ಟೋಲ್ ಗೇಟ್, ಕಾರಿಗನೂರು ಕ್ರಾಸ್, ಹೆಚ್.ಬಸಾಪುರ.

109-ಚನ್ನಗಿರಿ ವಿಧಾನಸಭಾ ಕ್ಷೇತ್ರ
ಜೋಳದಾಳ್, ಮಾವಿನಕಟ್ಟೆ, ತಾವರೆಕೆರೆ, ಮಾದಾಪುರ, ಸಂತೇಬೆನ್ನೂರು. 110-ಹೊನ್ನಾಳಿ ವಿಧಾನಸಭಾ ಕ್ಷೇತ್ರ: ನ್ಯಾಮತಿ ಪೊಲೀಸ್ ಠಾಣೆಯ ಟಿ.ಜಿ.ಹಳ್ಳಿ ಕ್ರಾಸ್, ಸವಳಂಗ, ಹೊಳೆಹರಳಹಳ್ಳಿ ಕ್ರಾಸ್, ಹೊನ್ನಾಳಿ ಪೊಲೀಸ್ ಠಾಣೆಯ ಗೊಲ್ಲರಹಳ್ಳಿ ಕ್ರಾಸ್, ಕುಳಗಟ್ಟೆ ಕ್ರಾಸ್, ಜೀನಹಳ್ಳಿ ಕ್ರಾಸ್ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.

ಜಿಲ್ಲಾಧಿಕಾರಿಗಳಿಂದ ಚೆಕ್‍ಪೋಸ್ಟ್‌ ಗಳಿಗೆ ಭೇಟಿ ಪರಿಶೀಲನೆ

ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಹೆಬ್ಬಾಳ್, ಶಾಮನೂರು ಕ್ರಾಸ್ ಚೆಕ್‍ಪೋಸ್ಟ್, ಹರಿಹರ ಸೇರಿದಂತೆ ವಿವಿಧ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಕಣ್ಗಾವಲಿಗಾಗಿ ಸ್ಥಾಪಿಸಿರುವ ಚೆಕ್‍ಪೋಸ್ಟ್‌ ಗಳಲ್ಲಿ ಸಿಬ್ಬಂದಿಗಳು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯವನ್ನು ನಿರ್ವಹಿಸುವುದರೊಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಎಲ್ಲಾ ವಾಹನಗಳ ತಪಾಸಣೆ ಮಾಡುವ ಮೂಲಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸೂಚನೆ ನೀಡಿದರು.

TAGGED:Davanagere Newsdinamaana.comEstablishment of 32 check posts in the district : DCಕಾಂಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್‌ಗಳ ಸ್ಥಾಪನೆದಿನಮಾನದಿನಮಾನ.ಕಾಂ.ದಾವಣಗೆರೆ ಸುದ್ದಿ
Share This Article
Twitter Email Copy Link Print
Previous Article Kannada campu remains rural ಕನ್ನಡದ ಕಂಪು ಗ್ರಾಮೀಣದಲ್ಲಿ ಉಳಿದಿದೆ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ 
Next Article Nomination for Ida Lovelace Company's Software World Organization :Dr.Rakesh ಐಡಾ ಲವ್‍ಲೇಸ್ ಕಂಪನಿಯ ಸಾಪ್ಟ್ವೇರ್‌ ವಿಶ್ವ ಸಂಸ್ಥೆಗೆ ನಾಮನಿರ್ದೇಶನ :ಡಾ.ರಾಕೇಶ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸಾಹಿತ್ಯ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು ; ಪಾಪುಗುರು

ದಾವಣಗೆರೆ (Davanagere): ಸಾಹಿತ್ಯ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಾಹಿತಿ ಮತ್ತು ಪತ್ರಕರ್ತ  ಪಾಪುಗುರು ಹೇಳಿದರು.…

By Dinamaana Kannada News

ಸರ್ ಮಿರ್ಜಾ ಇಸ್ಮಾಯಿಲ್ ರಸ್ತೆಗೆ “ಹೊಸ ನಾಮಫಲಕ” ಅಳವಡಿಸಿ

ದಾವಣಗೆರೆ : ನಗರದ ಅಂಬೇಡ್ಕರ ವೃತ್ತದ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ ಬಳಿ ಇರುವ ದಶಕಗಳ ಹಿಂದೆ ಸರ್ ಮಿರ್ಜಾ…

By Dinamaana Kannada News

ತಪೋವನದಲ್ಲಿ ಯೋಗ ದಿನಾಚರಣೆ

ದಾವಣಗೆರೆ : ತಪೋವನ ಸಮೂಹ ಸಂಸ್ಥೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಚಾರಣೆ ಆಚರಣೆ ಮಾಡಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಡಾ. ಶಶಿಕುಮಾರ್…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?