ದಾವಣಗೆರೆ : ಬಾರ್‌ಗೆ ಪರವಾನಿಗೆ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದು ಸಸ್ಪೆಂಡ್ ಆಗದಂತೆ ಕೆಎಟಿ ಮೊರೆ ಹೋಗಿ ಸ್ಟೇ ತಂದಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಹಿನ್ನಡೆಯಾಗಿದ್ದು, ಅಮಾನತು ಆದೇಶಕ್ಕೆ ತಡೆ ನೀಡಲು ಸಲ್ಲಿಸಿದ್ದ ಅರ್ಜಿ ಕೆಎಟಿ ವಜಾ ಮಾಡಿದೆ.
ದಾವಣಗೆರೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಸ್ವಪ್ನ ಹಾಗೂ ದಾವಣಗೆರೆ ಡೆಪ್ಯೂಟಿ ಸೂಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ಹಾಗೂ ಹರಿಹರ ಅಬಕಾರಿ ಇನ್ಸ್‌ಪೆಕ್ಟರ್ ಶೀಲಾ, ಎಫ್ ಡಿಎ ಅಶೋಕ್ ಕೆಎಟಿಗೆ ಹೋಗಿದ್ದರು. ಆದರೆ, ಲೋಕಾಯುಕ್ತ ಸರಕಾರಕ್ಕೆ ನೀಡಿದ ಎಲ್ಲ ದಾಖಲೆಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ. ಆದ್ದರಿಂದ ಜಸ್ಟೀಸ್, ಕೆಎಟಿ ಚೇರ್ ಮನ್ ಆರ್.ಬಿ.ಬೂದಿಹಾಳ್ ಈ ಅಧಿಕಾರಿಗಳಿಗೆ ನೀಡಿದ್ದ ಸ್ಟೇ ಆದೇಶವನ್ನು ವಾಪಸ್ ಪಡೆದುಕೊಂಡಿದೆ.
ಬಾರ್‌ಗೆ ಪರವಾನಿಗೆ ನೀಡಲು ಅಧಿಕಾರಿಗಳಉ 60 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಸೆ.14 ರಂದು 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿ ಈ ನಾಲ್ಕು ಅಧಿಕಾರಿಗಳನ್ನು ಬಂಧಿಸಿದ್ದರು, ಮತೊಬ್ಬ ಆರೋಪಿ ತಲೆ ಮರೆಸಿಕೊಡಿದ್ದರು. ನಂತರ ಎಲ್ಲರೂ ನ್ಯಾಯಾಲಯದ ಮೊರೆ ಹೋಗಿ ಜಾಮೀನು ಪಡೆದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸರಕಾರ ಅಮಾನತುಗೊಳಿಸಿತ್ತು. ಅಮಾನತು ಆದೇಶಕ್ಕೆ ಕೆಎಟಿಯಿಂದ ತಡೆ ತಂದು ಕೆಲಸಕ್ಕೆ ಹಾಜರಾಗಿದ್ದರು.
ಕೋರ್ಟ್ ಏನು ಹೇಳಿದೆ
ರಾಜ್ಯ ಸರಕಾರ ಅಮಾನತು ಗೆ ನೀಡಿರುವ ಆದೇಶ ಸರಿ ಇದೆ. ಎಲ್ಲ ದಾಖಲೆಗಳು ನಿಮ್ಮ ವಿರುದ್ದ ಇದೆ. ಆದ್ದರಿಂದ ಕೋರ್ಟ್ ಈ ವಿಷಯದಲ್ಲಿ ಮಧ್ಯ ಪ್ರವೇಶಿಸೋದಿಲ್ಲ. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಇಲಾಖಾ ತನಿಖೆ ಹಾಜರಾಗಬೇಕು. ಅಮಾನತು ವಿಷಯದಲ್ಲಿ ನಾವು ಮಧ್ಯಪ್ರವೇಶ ಮಾಡೋದಿಲ್ಲ ಆದ್ದರಿಂದ ನೀವು ನೀಡಿದ ಅರ್ಜಿ ವಜಾ ಮಾಡಿದ್ದೇವೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಯಾರು ಎಲ್ಲಿ ಕೆಲಸ
ಅಬಕಾರಿ ಉಪ ಆಯುಕ್ತೆ ಸ್ವಪ್ನ ಸದ್ಯ ಹಾವೇರಿ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಡೆಪ್ಯೂಟಿ ಸೂಪರಿಟೆಂಡೆಂಟ್ ರವಿಕುಮಾರ್ ಮರಿಗೌಡರ್ ದಾವಣಗೆರೆಯಲ್ಲಿ ಇದ್ದಾರೆ. ಹರಿಹರ ಅಬಕಾರಿ ಇನ್ಸೆಪೆಕ್ಟರ್ ಶೀಲಾ ರಾಣೆಬೆನ್ನೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಎಫ್ ಡಿಎ ಅಶೋಕ್ ಸಾಗರದ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.