ಜಗಳೂರು:ತಾಲ್ಲೂಕಿನ ಅರಿಶಿನಗುಂಡಿ,ತೋರಣಗಟ್ಟೆ,ಜಮ್ಮಾಪುರ ಜಮೀನುಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ಪಟ್ಟಣದ ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬುಧವಾರ ಪಟ್ಟಣದ ಬೆಸ್ಕಾಂ ಕಚೇರಿಗೆ ಆಗಮಿಸಿ ಧಿಡೀರ್ ಪ್ರತಿಭಟನೆ ನಡೆಸಿದರು
ರೈತರ ಜಮೀನುಗಳಲ್ಲಿ ಕೇವಲ 5 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಿಂದ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ.ಬೇಸಿಗೆ ಸಮಯದಲ್ಲಿ ರೈತರ ಬೆಳೆಗಳು ಬಾಡುತ್ತಿವೆ.ಬೆಸ್ಕಾಂ ಅಧಿಕಾರಿಗಳು ಕೇವಲ ದಿನಕ್ಕೆ 5 ಗಂಟೆಗಳ ಕಾಲ ನೀಡುವ ವಿದ್ಯುತ್ ನಲ್ಲಿಯೂ ಆಗಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಇಇ ರಜೆಯಲ್ಲಿದ್ದ ಕಾರಣ ಉಳಿದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡರು.
ಬೆಸ್ಕಾಂ ಇಲಾಖೆ ಎಇಇ ಮಲ್ಲಿಕಾರ್ಜುನ್ ಅವರು,ವಿಂಡ್ ಫ್ಯಾನ್ ವಿದ್ಯುತ್ ಉತ್ಪಾದನೆ ಕಡಿಮೆಯಿದ್ದು ರೈತರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.ಕಾರಣ ಕಳೆದ 15 ದಿನಗಳಿಂದ ರೈತರ ಜಮೀನುಗಳಲ್ಲಿ ವಿಂಡ್ ಫ್ಯಾನ್ ಕಂಪನಿಗಳ ಒಪ್ಪಂದದ ನವೀಕರಣ ಸಮಸ್ಯೆ ಯಿಂದ ವಿದ್ಯುತ್ ಉತ್ಪಾದನೆ ಸಮಸ್ಯೆಯಾಗಿತ್ತು.ಇದೀಗ ಸಮಸ್ಯೆ ಇತ್ಯರ್ಥಗೊಂಡಿದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ. ಸಮರ್ಪಕವಾಗಿ ದಿನದ 5 ಗಂಟೆಗಳಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
Read also : ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಕ್ಷೀಣ : ಕಣ್ವಕುಪ್ಪೆ ಶ್ರೀ
ಈ ಸಂದರ್ಭದಲ್ಲಿಅರಿಶಿನಗುಂಡಿ,ತೋರಣಗಟ್ಟೆ,ಜಮ್ಮಾಪುರ ಕೃಷ್ಣಪ್ಪ, ತಿಪ್ಪೇಸ್ವಾಮಿ, ವೀರೇಶ್, ರವಿ ಸೇರಿದಂತೆ ಇತರರು ಇದ್ದರು.
