ದಾವಣಗೆರೆ.ಜ.29; ರೂಪ ಜಿ.ಎಂ. ಇವರಿಗೆ ದಾವಣಗೆರೆ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗಭೂಷಣ್ ಗೌಡ ಪಿಯ. ಅವರ ಮಾರ್ಗದರ್ಶನದಲ್ಲಿ “Freedom and Unification Movement in Malnad Karnataka” (ಮಲೆನಾಡು ಕರ್ನಾಟಕದಲ್ಲಿ ಸ್ವಾತಂತ್ರ್ಯ ಮತ್ತು ಏಕೀಕರಣ ಚಳುವಳಿ) ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಗೌರವ ನೀಡಿದೆ.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ನಡೆಯಲಿರುವ 13 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಿದ್ದಾರೆ. ರೂಪ ಅವರು 2021-22ನೇ ಸಾಲಿನಲ್ಲಿ ಸಂಶೋಧನೆ ಆರಂಭಿಸಿ, ಡಿಸೆಂಬರ್ 2025ರಲ್ಲಿ ಪ್ರಬಂಧ ಸಲ್ಲಿಸಿದ್ದರು.
ರೂಪ ಜಿ.ಎಂ.ಅವರು ಪ್ರಕಾಶ್ ವಡ್ನಾಳ್ ಅವರ ಪತ್ನಿ, ದಾವಣಗೆರೆ ತಾಲ್ಲೂಕು ಹುಚ್ಚವ್ವನಹಳ್ಳಿ ಗ್ರಾಮದ ಜಿ.ಪಿ.ಮಹದೇವಪ್ಪ, ಸುಮಿತ್ರಮ್ಮ ಜಿ.ಎನ್. ದಂಪತಿ ಪುತ್ರಿ.
