ದಾವಣಗೆರೆ : ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಬೀತಿ ವಾತಾವರಣವಿಲ್ಲದೇ ಶಾಂತಿ ಸೌಹಾರ್ಧಯುತವಾಗಿ ಹಬ್ಬಗಳನ್ನು ಆಚರಿಸುವ ನಿಟ್ಟಿನಲ್ಲಿ ಜನರಲ್ಲಿ ಸುರಕ್ಷಿತ ಭಾವ ಮೂಡಿಸುವ ದೃಷ್ಠಿಯಿಂದ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳಾಗಿ ದಾವಣಗೆರೆ ನಗರದಲ್ಲಿ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಪೊಲೀಸ್ ಪಥ ಸಂಚಲನದಲ್ಲಿ ದಾವಣಗೆರೆ ನಗರ ಪೊಲೀಸ್ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣಬಸವೇಶ್ವರ ಪೊಲೀಸ್ ನಿರೀಕ್ಷಕರಾದ ಬಾಲಚಂದ್ರ ನಾಯ್ಕ್, ಲಕ್ಷ್ಮಣ್ ನಾಯ್ಕ್, ಅಶ್ವಿನ್ ಕುಮಾರ್, ನಂಜುಂಡಸ್ವಾಮಿ, ನಲವಾಗಲು ಮಂಜುನಾಥ, ಶ್ರೀಮತಿ ಮಲ್ಲಮ್ಮ ಚೌಬೆ, ಸುನೀಲ್ ಕುಮಾರ, ನೂರ್ ಅಹಮ್ಮದ್ ಸೇರಿದಂತೆ ನಗರದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಹಾಗೂ ಕ್ಯೂ ಆರ್ ಟಿ ತಂಡ, ಡಿಎಆರ್ ತುಕಡಿಗಳು, ಕೆ.ಎಸ್.ಆರ್.ಪಿ ತುಕಡಿಗಳು, ದುರ್ಗಾಪಡೆ ಅಧಿಕಾರಿ ಸಿಬ್ಬಂದಿಗಳು ಪಥ ಸಂಚಲನದಲ್ಲಿದ್ದರು.