ಜಗಳೂರು:ಬುಡಕಟ್ಟು ಆಚರಣೆ ಮಾಡಿಕೊಂಡು ಬರುವಂತ ಸಮುದಾಯಗಳ ಮುನ್ನೆ ಲೆಗೆ ಬರಬೇಕಾದರೆ ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಗುರುವಾರ ತಾಲೂಕಿನ ಲಿಂಗಣ್ಣನ ಹಳ್ಳಿ , ಕಟ್ಟಿಗೆ ಹಳ್ಳಿ ,ತೋರಣ ಗಟ್ಟೆ ಗ್ರಾಮದಲ್ಲಿ ವಿವಿಧ ಗ್ರಾಮಗಳಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿ 1.84 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಬುಡಕಟ್ಟು ಸಂಸ್ಕೃತಿಯ ಪ್ರತೀಕವಾಗಿರುವ ನಾಯಕ ಸಮುದಾಯದವರು ಹಲವಾರು ಸಾಹಿತ್ಯ ಸಂಸ್ಕೃತಿ ಹೊಂದಿದ್ದುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕಾಗಿದೆ.
32 ಕೋಟಿ ಕಾಮಗಾರಿ ಕಳೆದ ವಾರದಿಂದ ನಡೆದಿದೆ ಇದರಲ್ಲಿ ತೊರಣಗಟ್ಟೆ ಗ್ರಾಮಕ್ಕೆ ಸಿಂಹ ಪಾಲು ನೀಡಲಾಗಿದೆ. ಕಾಡು ಗಲ್ಲಾಗಿದ್ದ ನನ್ನನ್ನು ಶಿಲೆಯನ್ನಾಗಿ ಮಾಡಿದ್ದು ತೊರಣ ಗಟ್ಟೆ ಗ್ರಾಮದ ಶಿಕ್ಷ ಭೀಮಪ್ಪ. ಒಂದು ವತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ನಾವು ಕಷ್ಟ ಪಡುತ್ತಿದ್ದೆ ಅಂದು ಅವರ ಮಾರ್ಗದರ್ಶನವೇ ನಮಗೆ ವರವಾದವಾಯಿತು. ಅವರ ಕಲಿಸಿದ ವಿದ್ಯೆಯಿಂದ ನಾನು ಇಂದು ಶಾಸಕನಾಗಿ ನನ್ನ ಇಬ್ಬರು ಮಕ್ಕಳು ಉನ್ನತ ಸ್ಥಾನ ಮಾನ ಪಡೆದಿದ್ದಾರೆ. ನೀವುಗಳು ಮಾಡಿದ ಆರ್ಶೀವಾದ ದಿಂದ ನಾನು ಈ ಹಂತದಲ್ಲಿದೆ. ಅಹೋರಾತ್ರಿ ಶ್ರಮಿಸಿ ನಿಮ್ಮಗಳ ಋಣ ತೀರಿಸುವೆ ಎಂದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಬಹುತೇಕ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು. ಜಮ್ಮಾಪುರ ಗ್ರಾಮದ ಕೆರೆಗೆ ನೀರು ಏಕೆ ಬಂದಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ ಈ ಗ್ರಾಮ ಭದ್ರಮೇಲ್ದಾಂಡೆ ನೀರಾವರಿ ಯೋಜನೆಯ ವ್ಯಾಪ್ತಿಗೆ ಬರಲಿದೆ ಹಾಗಾಗಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸೇರಿಲ್ಲ. ವಿದ್ಯುತ್ ಗೆ ಸಂಬಂದಿಸಿ ದಂತೆ ಅಧಿಕಾರಿಗಳು ರೈತರಿಗೆ ತಾರತಮ್ಯ ಮಾಡುವಂತ ಅಧಿಕಾರಿಗಳನ್ನು ನಾನು ಸಹಿಸುವುದಿಲ್ಲ ವಿದ್ಯುತ್ ಸಂಬಂದಿಸಿದಂತೆ ದೂರುಗಳು ಕೇಳಿ ಬರುತ್ತಿವೆ . ಎಲ್ಲಾರೂ ರಾತ್ರಿ ವೇಳೆ ವಿದ್ಯುತ್ ಕೊಡಿ ಎಂದು ಬರುತ್ತಾರೆ ಎಲ್ಲಾರಿಗೂ ನ್ಯಾಯಾ ಒದಗಿಸಲಾಗುವುದು ಎಂದರು.
Read also : ಬೆಸ್ಕಾಂ ಎಇಇಗೆ ಲೋಕಾಯುಕ್ತ ಬಿಸಿ: ಶಿವಮೊಗ್ಗ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ
ಬಿಜೆಪಿ ಮಾಜಿ ಅಧ್ಯಕ್ಷ .ಹೆಚ್. ಜಿ. ಕೃಷ್ಣ ಮೂರ್ತಿ ಮಾತನಾಡಿ ಇತಿಹಾಸದಲ್ಲಿ ಯಾವ ಶಾಸಕರು ಗ್ರಾಮದ ದೇವಸ್ಥಾನಕ್ಕೆ ಅನುದಾನ ನೀಡಿರಲಿಲ್ಲ ಹಾಲಿ ಶಾಸಕ ಬಿ. ದೇವೇಂದ್ರ ಗ್ರಾಮದಲ್ಲಿ ಚರಂಡಿ ,ಸಿಸಿ ರಸ್ತೆ ಅಭಿವೃದ್ದಿಗೆ ಅನುದಾನ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಿಲ್ ಡಿ ಬ್ಯಾಂಕ್ ಅಧ್ಯಕ್ಷ ತಿಮ್ಮರಾಯಪ್ಪ , ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷೀರ್ ಅಹಮದ್,ಪಿಡಿಓ ಮರುಳು ಸಿದ್ದಪ್ಪ , ಮುಖಂಡರಾದ ಜೀವಣ್ಣ , ಬಾಲ ಕೃಷ್ಷ, ಬಾಲಪ್ಪ ಇತರರು ಇದ್ದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿದು ಬಂದಿದ್ದರಿಂದ ಅರ್ತಜಲ ಹೆಚ್ಚಾಳವಾಗಿ ಭೂಮಿ ಜೌಗೇರುತ್ತಿರುವು ದರಿಂದ ರೈತರು ನನ್ನನ್ನ ಮತ್ತು ಸಿರಿಗೆರೆ ಶ್ರೀ ಗಳನ್ನು ನೀರು ತಂದಿದ್ದರಿಂದ ನಮ್ಮ ಭೂಮಿ ಜೌಗೇರಲು ಕಾರಣವಾಗುತ್ತಿದೆ ಮಾತನಾಡಿಕೊಳ್ಳುತ್ತಿದ್ದಾರೆ.
ಶಾಸಕ ಬಿ. ದೇವೇಂದ್ರಪ್ಪ.
