ಹರಿಹರ: ರಾಜ್ಯದಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿ ಹುದ್ದೆದಲಿತರಿಗೆಕೊಡುವುದಿದ್ದರೆ ಮಾದಿಗ ಎಡಗೈ ಸಮುದಾಯಕ್ಕೆ ಸೇರಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಪರಿಗಣಿಸಬೇಕೆಂದು ಕರ್ನಾಟಕದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಏಳು ಬಾರಿ ಸಂಸದರಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ, ರಾಜ್ಯದಲ್ಲಿ ಈಗಲೂ ಸಚಿವರಾಗಿದ್ದಾರೆ, ರಾಜ್ಯದ ಕಾಂಗ್ರೆಸ್ ಪಕ್ಷದ ದಲಿತ ರಾಜಕಾರಣಿಗಳ ಪೈಕಿ ಅತ್ಯಂತ ಹಿರಿಯರು ಹಾಗೂ ಕಳಂಕ ರಹಿತರಾಗಿರುವುದು ಕೆ.ಎಚ್.ಮುನಿಯಪ್ಪರ ಹೆಚ್ಚುಗಾರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read also : Unstable relationships|ಸ್ಥಿರವಲ್ಲದ ಸಂಬಂಧಗಳು:ಗೀತಾ ಭರಮಸಾಗರ
1956ರಿಂದ ಈವೆರೆಗೆಯಾವ ಪಕ್ಷದಿಂದಲೂ ಶೋಷತರಲ್ಲೆ ಶೋಷಿತರೆನಿಸಿರುವ ಮಾದಿಗ ಎಡಗೈ ಸಮುದಾಯಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿಲ್ಲ. ಸಾಮಾಜಿಕ ನ್ಯಾಯದ ಮಾತನಾಡುವ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಹೈಕಮಾಂಡ್ ಯಾವುದೆ ಒತ್ತಡಕ್ಕೆ ಮಣಿಯದೆ ಮಾದಿಗ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಕೆ.ಎಚ್.ಮುನಿಯಪ್ಪನವರಿಗೆ ಆಧ್ಯತೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
