ಹರಿಹರ (Harihara): ಜಿಲ್ಲಾ ಕೇಂದ್ರ ಗ್ರಂಥಾಲಯ ಹರಿಹರ ಶಾಖಾ ಗ್ರಂಥಾಲಯದಲ್ಲಿ ವಿಶ್ವ ಗುರು ಜಗಜ್ಯೋತಿ ಬಸವಣ್ಣನವರ 892ನೇ ಜಯಂತಿಯನ್ನು ಆಚರಿಸಲಾಯಿತು.
12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಿದ ದಾರ್ಶನಿಕ, ವೀರಶರಣ ಜಗಜ್ಯೋತಿ ಬಸವಣ್ಣ ಅವರ ಚಿಂತನೆ, ತತ್ವದರ್ಷಗಳು ಇಂದಿಗೂ ಪ್ರಸ್ತುತ ಸಾಮಾಜಿಕ ಸುಧಾರಣೆಗೆ ಅವರು ನೀಡಿದ ಕೊಡುಗೆ ಅಪಾರ.
ಶಿವಶರಣರ ಒಗ್ಗೂಡುವಿಕೆಗೆ ರಚಿಸಿದ್ದ ಅನುಭವ ಮಂಟಪವು ದೇಶದ ಸಂಸತ್ ಭವನ ನಿರ್ಮಾಣಕ್ಕೂ ಪ್ರೇರಣೆಯಾಗಿದೆ. ದಯಾ ಇಲ್ಲದ ಧರ್ಮ ಅದಾವುದ್ಯಯಾ? ಎಂದು ಪ್ರಶ್ನಿಸಿದ ಬಸವಣ್ಣನವರ ಅನೇಕ ವಚನಗಳು ಸಾಮಾಜಿಕ- ಧಾರ್ಮಿಕ ಕ್ರಾಂತಿಗೆ ಕಾರಣವಾಗಿವೆ.
Read also : ವಿಶ್ವ ಕಾರ್ಮಿಕರ ದಿನಾಚರಣೆ | ಬದುಕಿಗಾಗಿ ಹೋರಾಟ – ಹೋರಾಟಕ್ಕಾಗಿ ಬದುಕು
ಶಾಖಾ ಪ್ರಭಾರ ಅಧಿಕಾರಿ ರವಿಕುಮಾರ್ ಅವರು ಪುಷ್ಪ ನಮನ ಸಲ್ಲಿಸಿದರು. ಕೇಶವ ಎಸ್, ರಮೇಶ್ ಬೆಳ್ಳೂಡಿ, ಉಮೇಶ್ ರೆಡ್ಡಿ, ಸಂತೋಷ ಹಾಗೂ ಓದುಗರು, ಸಾರ್ವಜನಿಕರು ಉಪಸ್ಥಿತರಿದ್ದರು.