ದಾವಣಗೆರೆ : ಬೈಕ್ ತಡೆದು ಹಲ್ಲೆ ಮಾಡಿ ದರೋಡೆ ಮಾಡಿದ್ದ 06 ಜನ ಆರೋಪಿಗಳನ್ನು ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿ, ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಹನುಮಂತ, ಅಮಿತ್, ಅಜಿತ್, ವಿಷ್ಣು , ಕಿರಣ, ಅಜೇಯ ಬಂಧಿತರು.
ಬಂಧಿತರಿಂದ 30.120/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 1.80.000/- ರೂ ಮೌಲ್ಯದ 02 ಬೈಕ್, 01 ಸ್ಕೂಟಿ ಹಾಗೂ 20,000/- ರೂ ಮೌಲ್ಯದ 05 ಮೋಬೈಲ್ ಗಳು ಹಾಗು ಅರ್ಧ ಚಂದ್ರಾಕಾರದ ಕಬ್ಬಿಣದ ಹಂಚ್ ವಶಪಡಿಸಿಕೊಂಡು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ, ತನಿಖೆ ಮುಂದುವರೆಸಿದ್ದಾರೆ.
ಹರಿಹರ ನಗರದ ವಿಜಯನಗರ ವಾಸಿ ಆದಿತ್ಯ ಕೊಂಡಜ್ಜಿಯಲ್ಲಿರುವ ತಮ್ಮ ಬಾರ್ ಬಂದ್ ಮಾಡಿಕೊಂಡು ಬಾರ್ ನಿಂದ ಸಂಗ್ರಹವಾದ 67,000/- ರೂ ನಗದು ಹಣವನ್ನು ಬರುವ ವೇಳೆ 02 ಬೈಕ್ ಗಳಲ್ಲಿ 05 ಜನರು ಹಿಂಬಾಲಿಸಿಕೊಂಡು ಬಂದು ಯಾವುದೋ ಒಂದು ಕಬ್ಬಿಣದ ಆಯುಧದಿಂದ ಹಲ್ಲೆ ಮಾಡಿ 67,000/- ರೂಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರು ಸಲ್ಲಿಸಿದ್ದರು.
Read also : ಕರಾಟೆ ಸ್ಪರ್ಧೆ: ಈಶ್ವರಮ್ಮ ಶಾಲೆಯ ತರುಣ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಗ್ರಾಮಾಂತರ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ.ಬಿ.ಎಸ್ ಮಾರ್ಗದರ್ಶನದಲ್ಲಿ ಹರಿಹರ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ಸಗರಿ ರವರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಯುವರಾಜ ಕಂಬಳಿ ಪಿ.ಎಸ್.ಐ(ಕಾ&ಸು), ಮಂಜುಳಾ ಡಿ ಪಿ.ಎಸ್.ಖ(ತನಿಖೆ) ಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡವು ಕ್ಷಿಪ್ರ ಕಾರ್ಯಚರಣೆ ನಡೆಸಿ ಪ್ರಕರಣದಲ್ಲಿನ ಆರೋಪಿಗಳನ್ನು ಬಂಧಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.
